ಮನೆಯೊಂದರಲ್ಲಿ ಎರಡು ನರಿ ಮರಿ ರಕ್ಷಿಸಿದ ಅರಣ್ಯ ಅಧಿಕಾರಿಗಳು!

ಚಿಕ್ಕೋಡಿ:– ವ್ಯಕ್ತಿಯ ಮನೆ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಎರಡು ನರಿ ಮರಿಗಳನ್ನು ರಕ್ಷಣೆ ಮಾಡಿದ ಘಟನೆ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ಜರುಗಿದೆ. ಕೇಂದ್ರ ಸರ್ಕಾರದಿಂದ ಮತ್ತೆ ಅನ್ಯಾಯ: CM ಸಿದ್ದರಾಮಯ್ಯ ಕೆಂಡಾಮಂಡಲ! ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿದ ವೇಳೆ ಮಹಾಲಿಂಗ ದೊಡ್ಡಮನಿ ಎಂಬುವರ ಮನೆಯಲ್ಲಿ ನರಿಗಳು ಪತ್ತೆಯಾಗಿದೆ. ಕೂಡಲೇ ನರಿಗಳನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಘಟನೆ ಸಂಬಂಧ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ