ಸ್ಮಾರ್ಟ್ ಫೋನ್ಗಳು ಈಗ ಎಲ್ಲರ ಬದುಕಿನ ಭಾಗವಾಗಿದೆ. ದಿನದ ಸಾಕಷ್ಟು ಕೆಲಸ ಕಾರ್ಯಗಳಿಗೆ ಸ್ಮಾರ್ಟ್ಫೋನ್ಗಳೇ ಆಧಾರವಾಗಿವೆ.
ನಮ್ಮ ಆಂಡ್ರಾಯ್ಡ್ ಫೋನ್ನನ್ನು ಫಾಸ್ಟ್ ಆಗಿಸಲು ಕೆಲವೊಂದು ಮಾರ್ಗೋಪಾಯಗಳಿವೆ. ಇವುಗಳನ್ನು ಪಾಲಿಸಿಕೊಂಡು ಹೋದರೆ ಫೋನ್ ಸ್ಲೋ ಆಗುವ ಕಷ್ಟದಿಂದ ಕೊಂಚ ಮುಕ್ತಿ ಪಡೆಯುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆ ಮಾರ್ಗೋಪಾಯಗಳೇನು…? ಇಲ್ಲಿದೆ ಕೆಲ ಸರಳ ಟಿಪ್ಸ್.
ಕ್ಯಾಶೆ ಕ್ಲಿಯರ್ ಮಾಡಿ : ದಿನ ಕಳೆದಂತೆ ಕ್ಯಾಶೆ ಡೇಟಾ ಸಂಗ್ರಹವಾಗುತ್ತಾ ಹೋಗುತ್ತದೆ. ಇದು ನಿಮ್ಮ ಫೋನನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಕ್ಯಾಶೆ ಡೇಟಾ ಕ್ಲಿಯರ್ ಮಾಡುವುದು ಬಹಳ ಅಗತ್ಯ. ಅದಕ್ಕೆ ನೀವು ಸೆಟ್ಟಿಂಗ್ಗೆ > ಸ್ಟೋರೇಜ್ > ಕ್ಯಾಶೆಡ್ ಡೇಟಾಕ್ಕೆ ಹೋಗಿ ಕ್ಲಿಯರ್ ಮಾಡಬೇಕು. ಹೀಗೆ ಆಗಾಗ ಕ್ಯಾಶೆ ಡೇಟಾ ಕ್ಲಿಯರ್ ಮಾಡುತ್ತಿದ್ದರೆ ಮೆಮೋರಿ ಸ್ಪೇಸ್ ಫ್ರೀ ಆಗುತ್ತದೆ ಮತ್ತು ನಿಮ್ಮ ಡಿವೈಜ್ನ ಪರ್ಫಾರ್ಮೆನ್ಸ್ ಉತ್ತಮವಾಗುತ್ತದೆ.
ಅನಗತ್ಯ ಆಪ್ಗಳು : ಸಾಕಷ್ಟು ಆಪ್ಗಳನ್ನು ನಾವು ಬಳಸುತ್ತೇವೆ. ಆದರೆ ಕೆಲವೊಂದು ಆಪ್ಗಳನ್ನು ಒಮ್ಮೆ ಬಳಸಿ ಮತ್ತೆ ಅವುಗಳತ್ತ ತಿರುಗಿಯೂ ನೋಡುವುದಿಲ್ಲ ಅಥವಾ ಅಪರೂಪಕ್ಕೊಮ್ಮೆ ಬಳಸುತ್ತೇವೆ. ಹೀಗೆ ನಿಮ್ಮ ಮೊಬೈಲ್ನಲ್ಲಿ ಇರುವ ಅನಗತ್ಯ ಆಪ್ಗಳ ಬಗ್ಗೆ ಗಮನ ಇರಲಿ. ಇಂತಹ ಆಪ್ಗಳನ್ನು ಡಿಲೀಟ್ ಮಾಡಿ. ಹೀಗೆ ಅನಗತ್ಯ ಆಪ್ಗಳನ್ನು ಡಿಲೀಟ್ ಮಾಡುವುದರಿಂದ ಸ್ಟೋರೇಜ್ ಸ್ಪೇಸ್ ಅಷ್ಟೇ ಫ್ರೀ ಆಗುವುದಲ್ಲ, ಬದಲಾಗಿ ಬ್ಯಾಕ್ಗ್ರೌಂಡ್ ಪ್ರೋಸೆಸ್ಗಳನ್ನು ಕಡಿಮೆಯಾಗಿಸುತ್ತದೆ. ಇದು ನಿಮ್ಮ ಮೊಬೈಲ್ ಫೋನ್ನ ಕಾರ್ಯಕ್ಷಮತೆ ಹೆಚ್ಚಿಸಲು ಸಹಾಯ ಮಾಡುತ್ತದೆ.
ಸಾಫ್ಟ್ವೇರ್ ಅಪ್ಡೇಟ್ : ನಿಮ್ಮ ಆಂಡ್ರಾಯ್ಡ್ ಫೋನ್ನ ಸಾಫ್ಟ್ವೇರ್ ಅನ್ನು ಅಪ್ ಡೇಟ್ ಮಾಡಿಟ್ಟುಕೊಳ್ಳಿ. ಸಿಸ್ಟಮ್ ಅಪ್ಡೇಟ್ ಅನ್ನು ಸೆಟ್ಟಿಂಗ್ > ಸಾಫ್ಟ್ವೇರ್ ಅಪ್ಡೇಟ್ಗೆ ಹೋಗಿ ಚೆಕ್ ಮಾಡಿಕೊಳ್ಳಿ. ಇಲ್ಲಿ ಯಾವುದಾದರೂ ಅಪ್ಡೇಟ್ಗಳಿದ್ದರೆ ಇನ್ಸ್ಟಾಲ್ ಮಾಡಿಕೊಳ್ಳಿ.
ಬ್ಯಾಕ್ಗ್ರೌಂಡ್ ಡಾಟಾ : ಹಲವು ಆಪ್ಗಳು ಸಕ್ರಿಯವಾಗಿ ಬಳಕೆಯಲ್ಲಿ ಇಲ್ಲದ ಸಂದರ್ಭದಲ್ಲೂ ಬ್ಯಾಕ್ಗ್ರೌಂಡ್ ಡಾಟಾವನ್ನು ಬಳಸಿಕೊಳ್ಳುತ್ತವೆ. ಹೀಗಾಗಿ, ಬ್ಯಾಕ್ಗ್ರೌಂಡ್ ಡಾಟಾಗಳನ್ನು ಡಿಸೇಬಲ್ ಮಾಡಿಟ್ಟುಕೊಳ್ಳುವುದು ಉತ್ತಮ. ಸೆಟ್ಟಿಂಗ್ > ಆಪ್ಸ್>(ಆಪ್ ಹೆಸರುಗಳಿರುತ್ತವೆ) > ಮೊಬೈಲ್ ಡಾಟಾ ಮತ್ತು ಇಲ್ಲಿ ನೀವು ಆಯ್ಕೆ ಮಾಡಿದ ಆಪ್ನ `ಬ್ಯಾಕ್ಗ್ರೌಂಡ್ ಡಾಟಾ’ ಆಯ್ಕೆಯನ್ನು ಡಿಸೇಬಲ್ ಮಾಡಿ.
ಸ್ಥಿರ ವಾಲ್ಪೇಪರ್ ಬಳಸಿ : ವಿಡ್ಜೆಟ್ಗಳು ಮತ್ತು ಲೈವ್ ವಾಲ್ಪೇಪರ್ಗಳ ಬಳಕೆ ಕಡಿಮೆ ಮಾಡಿ. ಇವುಗಳು ನಿಮ್ಮ ಫೋನ್ನ ಕಾರ್ಯಕ್ಷಮತೆಯ ಮೇಲೆ ಪ್ರಭಾವ ಬೀರುತ್ತವೆ. ಹೀಗಾಗಿ ಅನಗತ್ಯ ವಿಡ್ಜೆಟ್ಗಳನ್ನು ನಿಮ್ಮ ಹೋಮ್ ಸ್ಕ್ರೀನ್ನಿಂದ ತೆಗೆದು ಹಾಕಿ ಮತ್ತು ಸ್ಥಿರವಾದ ವಾಲ್ಪೇಪರ್ ಬಳಕೆ ಮಾಡಿ.
ಫೋನ್ ರೀಸ್ಟಾರ್ಟ್ ಮಾಡಿ : ವಾರಕ್ಕೆ ಒಮ್ಮೆಯಾದರೂ ನಿಮ್ಮ ಮೊಬೈಲ್ ಫೋನ್ ಅನ್ನು ರೀಸ್ಟಾರ್ಟ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ. ಫೋನ್ ರೀಸ್ಟಾರ್ಟ್ ಮಾಡುವುದರಿಂದ ಬ್ಯಾಕ್ಗ್ರೌಂಡ್ ಪ್ರೋಸೆಸ್ಗಳನ್ನು ನಿಲ್ಲಿಸುತ್ತದೆ. ಇದು ನಿಮ್ಮ ಡಿವೈಜ್ ಉತ್ತಮ ಕಾರ್ಯಕ್ಷಮತೆ ತೋರಿಸಲು ಸಹಾಯ ಮಾಡುತ್ತದೆ.
ಈ ಎಲ್ಲಾ ಕ್ರಮಗಳ ಬಳಿಕವೂ ನಿಮ್ಮ ಫೋನ್ ಸ್ಲೋ ಆಗುತ್ತಿದ್ದರೆ ಕೊನೆಗೆ ಇರುವ ಆಯ್ಕೆ ಫ್ಯಾಕ್ಟರಿ ರೀಸೆಟ್. ಫ್ಯಾಕ್ಟರಿ ರೀಸೆಟ್ನಿಂದ ನಿಮ್ಮ ಫೋನ್ ಹೊಸ ಆರಂಭವನ್ನು ಪಡೆಯುತ್ತದೆ. ಆದರೆ ಒಂದು ಪ್ರಮುಖ ಸಂಗತಿಯನ್ನು ನೆನಪಿಡಿ. ಫ್ಯಾಕ್ಟರಿ ರೀಸೆಟ್ ಮಾಡುವುದರಿಂದ ನಿಮ್ಮ ಮೊಬೈಲ್ನಲ್ಲಿ ಇರುವ ಎಲ್ಲಾ ಡೇಟಾಗಳು ಅಳಿಸಿ ಹೋಗುತ್ತವೆ. ಇದನ್ನು ಮರೆಯಬೇಡಿ.