ಬೆಂಗಳೂರು: ಇಂದಿನಿಂದ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ 218ನೇ ಫಲಪುಷ್ಪಪ್ರದರ್ಶನ ನಡೆಯುತ್ತಿದೆ. ವಚನಕಾರರ ಥೀಮ್ ನಲ್ಲಿ ವಿಶೇಷ ಪ್ರದರ್ಶನ ಜರುಗಿದೆ.
ಲಾಲ್ಬಾಗ್ ನ ಕೇಂದ್ರ ಬಿಂದು ಗಾಜಿನ ಮನೆಯಲ್ಲಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣ್ಣ ಪ್ರತಿರೂಪ ಇದ್ದು, ನೂತನ ಅನುಭವ ಮಂಟಪ ವಿಶೇಷ ಹೂಗಳಿಂದ ಅಲಂಕಾರಗೊಂಡಿದೆ. ಇಂದು ಸಂಜೆ 6ಕ್ಕೆ ಸಿಎಂ ಸಿದ್ದರಾಮಯ್ಯರಿಂದ ಫಲಪುಷ್ಪಪ್ರದರ್ಶನಕ್ಕೆ ಚಾಲನೆ ದೊರೆಯಲಿದೆ.
ಇಂದಿನಿಂದ ಜನವರಿ 28ರವರೆಗೆ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ನಡೆಯಲಿದ್ದು ಸಂಜೆ 6 ಗಂಟೆಗೆ ಸಿಎಂ ಸಿದ್ಧರಾಮಯ್ಯ ಅವರಿಂದ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ಸಿಗಲಿದೆ.
ಈ ಬಾರಿ ವಿಶ್ವಗುರು ಬಸವಣ್ಣ , ಗಣರಾಜ್ಯೋತ್ಸವ ಥೀಮ್ ನಲ್ಲಿ ಫ್ಲವರ್ ಶೋ ಜರುಗಲಿದ್ದು 2024 ಜನವರಿ 26ರ ಗಣರಾಜ್ಯೋತ್ಸವದ ಅಂಗವಾಗಿ ಪ್ಲವರ್ ಶೋ
ಜನವರಿ 18 ರಿಂದ 28ರವರಗೆ ಒಟ್ಟು 11 ದಿನಗಳ ಕಾಲ ಫ್ಲವರ್ ಶೋ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ 32 ಲಕ್ಷ ಹೂವುಗಳ ಬಳಕೆಬಸವಣ್ಣನವರ ಪ್ರತಿಮೆಯ ಜೊತೆಗೆ ಅನುಭವ ಮಂಟಪ (ಸಂಸತ್ತು) ಹೂವಿನ ಪ್ರತಿಕೃತಿಗಳು ಹೂವಿನ ಮೂಲಕ ಅನಾವರಣ ಅನುಭವ ಮಂಟಪವು 34 ಅಡಿ ಅಗಲ ಮತ್ತು 30 ಅಡಿ ಎತ್ತರದ ಮೂರು ಬಣ್ಣಗಳ 1.5 ಲಕ್ಷ ಹೂಗಳ ಮೂಲಕ ಅಲಂಕಾರ ಗುಲಾಬಿಗಳು, ಹಳದಿ, ಗುಲಾಬಿ ಮತ್ತು ಬಿಳಿ ಬಣ್ಣದ ಸೇವಂತಿಗೆ ಹೂವುಗಳಿಂದ ಅನುಭವ ಮಂಟಪ ರಚನೆ
ಪ್ರವೇಶ ಶುಲ್ಕ
ವಯಸ್ಕರಿಗೆ – 80
ಮಕ್ಕಳಿಗೆ 12 ವರ್ಷ ಒಳಗಿನವರಿಗೆ -30
ಶಾಲಾ ಮಕ್ಕಳಿಗೆ ಫ್ರೀ ಎಂಟ್ರಿ ( ಶಾಲಾ ವಸ್ತ್ರ ಧರಿಸಿದವರಿಗೆ)