ಹುಬ್ಬಳ್ಳಿ: ಕರ್ನಾಟಕದಲ್ಲಿ ಈ ಹಿಂದೆ ಇದೆ ಬಿಜೆಪಿ ಸರ್ಕಾರ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವ ಭರವಸೆ ಕೊಟ್ಟು ಮೋಸ ಮಾಡಿದ್ದು ಜಗಜ್ಜಾಹಿರ ಅಲ್ಲದೆ ಈ ಹಿಂದೆ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳನ್ನು ಮಾಡುವಾಗ ಪಂಚಮಸಾಲಿ ನಾಯಕರನ್ನು ಪರಿಗಣಿಸಲಿಲ್ಲ ಈಗ ರಾಜ್ಯ ಬಿಜೆಪಿ ಘಟಕಕ್ಕೆ ಹಾಗೂ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಪಂಚಮಸಾಲಿಗಳನ್ನು ಪರಿಗಣಿಸಲಿಲ್ಲ ಲಿಂಗಾಯತ ಸಮಾಜದಲ್ಲಿ ಅತ್ಯಂತ ದೊಡ್ಡ ಜನಸಂಖ್ಯೆ ಹೊಂದಿರುವ ಪಂಚಮಸಾಲಿ ನಾಯಕರನ್ನು ಬಿಜೆಪಿಯಲ್ಲಿ ಮೂಲೆ ಗುಂಪು ಮಾಡಲಾಗುತ್ತಿದೆ.
ಪಂಚಮಸಾಲಿಗಳನ್ನು ಅಧಿಕಾರ ಹಿಡಿಯಲು ಉಪಯೋಗಿಸಿಕೊಳ್ಳುತ್ತಿದ್ದು ಆಯಕಟ್ಟಿನ ಮಹತ್ವದ ಸ್ಥಾನಗಳಿಂದ ಅವರನ್ನು ದೂರ ಇಡಲಾಗುತ್ತದೆ ಎಂದು ಗಂಗಾಧರ ದೊಡ್ಡವಾಡ ಕಿಡಿ ಕಾರಿದ್ದಾರೆ ಇದರ ಪರಿಣಾಮ ಮುಂಬರುವ ಚುನಾವಣೆಗಳಲ್ಲಿ ಪಂಚಮಸಾಲಿಗಳು ತೋರಿಸಲಿದ್ದಾರೆ ಎಂದು ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಗಂಗಾಧರ ದೊಡವಾಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.