ಬೆಂಗಳೂರು: ಓಮಿಕ್ರಾನ್ ಮತ್ತು ಕೊರೊನಾ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದೆ. ಅದರಂತೆ ಇಂದು ಮೊದಲ ವಾರದ ವೀಕೆಂಡ್ ಕರ್ಫ್ಯೂ ಮುಗಿದಿದ್ದು, ಜನಜೀವನ ಎಂದಿನಂತೆ ತಮ್ಮ ವ್ಯಾಪಾರದಲ್ಲಿ ನಿರತವಾಗಿದೆ. ಆದರೆ ವೀಕೆಂಡ್ ಕರ್ಫ್ಯೂ ವೇಳೆ ಅನಗತ್ಯವಾಗಿ ಓಡಾಡಿದವರಿಗೆ ದಂಡದ ಬಿಸಿ ಮುಟ್ಟಿಸಿ,
ಬಹಳ ಕಟ್ಟುನಿಟ್ಟಾಗಿ ಮೊದಲ ವಾರದ ವೀಕೆಂಡ್ ಕರ್ಫೂವನ್ನು ಪೊಲೀಸರು ಯಶಸ್ವಿ ಗೊಳಿಸಿದ್ದಾರೆ. ಅದರಂತೆ ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೊರೊನಾ ರೂಲ್ಸ್ ಬ್ರೇಕ್ ಮಾಡಿದವರಿಗೆ ಫೈನ್ ವಿಧಿಸಲಾಗಿದ್ದು, 1,541 ಕೇಸ್ ದಾಖಲು ಮಾಡಲಾಗಿದೆ. ಅಲ್ಲದೇ ನಿಯಮ ಉಲ್ಲಂಘಿಸಿದವರಿಂದ 3ಲಕ್ಷದ 85 ಸಾವಿರದ 250 ರೂಪಾಯಿ ದಂಡ ವಸೂಲಿ ಮಾಡುವ ಮೂಲಕ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
