ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೊಲೀಸರ ಗನ್ನು ಮತ್ತೆ ಸದ್ದು ಮಾಡಿದ್ದು, ರೌಡಿಶೀಟರ್ ಫರ್ವೇಜ್ ಮೇಲೆ ಫೈರಿಂಗ್ ಮಾಡಲಾಗಿದೆ. ಫರ್ವೇಜ್ ಎಂಬ ಆರೋಪಿ ಡಿಸೆಂಬರ್ 30 ರಂದು ಲಾಲ್ ಬಾಗ್ ಬಳಿ ದಾರಿಹೋಕರನ್ನು ಸುಲಿಗೆ ಮಾಡಿ ಮೊಬೈಲ್ ಗಳನ್ನು ಕಳ್ಳತನ ಮಾಡಿದ್ದ. ಈ ಸಂಬಂಧ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನೂ ದೂರಿನ ಅನ್ವಯ ಖಚಿತ ಮಾಹಿತಿ,
ಆಧರಿಸಿ ತಲಘಟ್ಟಪುರ ಬಳಿ ತೆರಳಿದ ಪೊಲೀಸರು, ಈ ವೇಳೆ ಕಾನ್ಸ್ಟೇಬಲ್ ಪರಮೇಶ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಆರೋಪಿ ಯತ್ನಿಸಿದ್ದಾನೆ. ಹೀಗಾಗಿ ಆತ್ಮ ರಕ್ಷಣೆಗಾಗಿ ಆರೋಪಿ ಫರ್ವೇಜ್ ಎಡಗಾಲಿಗೆ ಸಿದ್ಧಾಪುರ ಇನ್ಸ್ಪೆಕ್ಟರ್ ಅಂತೋನಿ ಗುಂಡು ಹಾರಿಸಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಆರೋಪಿಯನ್ನು ಪೊಲೀಸರು ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಹೇಳಲಾಗಿದೆ.

