ಬೆಂಗಳೂರು:- ದೀಪಾವಳಿ ಹಿನ್ನೆಲೆ ಪಟಾಕಿ ಸಿಡಿಸಿ ಕಣ್ಣಿಗೆ ಗಾಯಮಾಡಿಕೊಂಡ ಸುಮಾರು 14 ಮಂದಿ ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದಾರೆ.
69ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ: ಧ್ವಜಾರೋಹಣ ನೆರವೇರಿಸಿದ ಎಚ್.ಕೆ ಪಾಟೀಲ್
ಈ ಬಗ್ಗೆ ಮಿಂಟೋ ಆಸ್ಪತ್ರೆಯ ನಿರ್ದೇಶಕ ಡಾ.ನಾಗರಾಜ್ ಜಿ ಹೇಳಿಕೆ ಕೊಟ್ಟಿದ್ದು, ಪಟಾಕಿ ಅವಘಡದಿಂದ ಮಿಂಟೋ ಆಸ್ಪತ್ರೆಯಲ್ಲಿ 14 ಕೇಸ್ ದಾಖಲಾಗಿದೆ. ಐವರು ಆಸ್ಪತ್ರೆಯಲ್ಲಿ ದಾಖಲಾಗಿದ್ದು 9 ಮಂದಿ ಔಟ್ ಪೇಷೆಂಟ್ ಚಿಕಿತ್ಸೆ ನೀಡಲಾಗುತ್ತಿದೆ.
10 ಜನರಿಗೆ ಸಣ್ಣ ಗಾಯವಾಗಿದ್ದು, 4 ಮಂದಿಗೆ ಗಂಭೀರ ಗಾಯವಾಗಿದೆ. 14 ಜನರ ಪೈಕಿ 6 ವಯಸ್ಕರು, 8 ಮಕ್ಕಳಿಗೆ ತೊಂದರೆ ಉಂಟಾಗಿದೆ.
ಇಬ್ರೂ ಮಕ್ಕಳಿಗೆ ಕಣ್ಣಿನ ಆಪರೇಷನ್ ಮಾಡಲಾಗಿದೆ. 5 ವರ್ಷ, 11 ವರ್ಷ ಬಾಲಕನಿಗೆ ಆಪರೇಷನ್ ಮಾಡಲಾಗಿದೆ. 14 ಕೇಸ್ ಪೈಕಿ 8 ಜನರು ತಾವೇ ಪಟಾಕಿ ಸಿಡಿಸಿ ಗಾಯಮಾಡ್ಕೊಂಡಿದ್ದಾರೆ. ಬೇರೆಯವರು ಸಿಡಿಸಿದ ಪಟಾಕಿಯಿಂದ 6 ಜನರಿಗೆ ಗಾಯವಾಗಿದೆ.
ಇಬ್ರೂ ಮಕ್ಕಳ ಆಪರೇಷನ್ ನಡೆದಿದೆ. ಎಷ್ಟೇ ಚಿಕಿತ್ಸೆ ಕೊಟ್ರೂ ಈ ಹಿಂದಿರುವ ದೃಷ್ಟಿ ಬರಲ್ಲ. ಇಬ್ರೂ ಮಕ್ಕಳ ಕಾರ್ನಿಯಾ ಹರಿದೋಗಿದೆ. ಲಕ್ಷ್ಮಿ ಪಟಾಕಿಯಿಂದ ಇಬ್ಬರಿಗೆ ಗಂಭೀರ ಗಾಯವಾಗಿದೆ.
ಕಣ್ಣಿನಕರಿ ಗುಡ್ಡೆ ಒಡೆದು ಹೋಗಿ ಗಾಯವಾಗಿದ್ದು, ಇಬ್ಬರಿಗೂ ಆಪರೇಷನ್ ಮಾಡಲಾಗಿದೆ ಎಂದು ಹೇಳಿದ್ದಾರೆ.