ಶಹಾಪೂರ ಅರಣ್ಯ ಪ್ರದೇಶದಲ್ಲಿ ಬೆಂಕಿ ; ಅಪಾರ ಪ್ರಮಾಣದ ಸಸ್ಯಸಂಪತ್ತು ನಾಶ

ಬೀದರ್ : ಶಹಾಪೂರ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆಕಸ್ಮಿಕ ಅಗ್ನಿ ಅವಘಡದಿಂದ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶಗೊಂಡಿದೆ. ಬೀದರ್ ‌ನಗರಕ್ಕೆ ಹೊಂದಿಕೊಂಡಿರುವ ಶಹಾಪೂರ  ಸಂಶೋಧನಾ ಅರಣ್ಯ ವಲಯದಲ್ಲಿ ಅಗ್ನಿಅವಘಡ ಸಂಭವಿಸಿದೆ. ಇನ್ನೂ ರೈತರು ಜಮೀನಿನಲ್ಲಿ ಸಂಗ್ರಹಿಸಿಟ್ಟಿದ ಹುಲ್ಲಿಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಶಹಾಪುರ ಅರಣ್ಯ ವಲಯದ 15 ರಿಂದ 20ಎಕರೆಗೆ ಬೆಂಕಿಗಾಹುತಿಯಾಗಿದೆ. ಅರಣ್ಯ ಪ್ರದೇಶ ಸುತ್ತಲೂ ಟ್ರೆಂಚ್ ಮತ್ತು ತಂತಿ ಬೇಲಿ ಹಾಕಿದ್ದರಿಂದ ಬೆಂಕಿ ನಂದಿಸಲು ಹರಸಾಹಸಪಡುವಂತಾಗಿತ್ತು.