ಉಡುಪಿ: ಅಗ್ನಿ ಅವಘಡದಿಂದಾಗಿ (Fire Accident) 7 ಮೀನುಗಾರಿಕಾ ಬೋಟ್ಗಳು (Boats) ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಗಂಗೊಳ್ಳಿಯಲ್ಲಿ (Gangolli) ನಡೆದಿದೆ. ದೀಪಾವಳಿ (Deepavali) ಪೂಜೆಯ ವೇಳೆ ಹಚ್ಚಿದ ಪಟಾಕಿಯಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ. ಬೈಂದೂರು ಹಾಗೂ ಗಂಗೊಳ್ಳಿ ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ರವಾನೆ ಮಾಡಲಾಗಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ ಬಿ.ವೈ.ವಿಜಯೇಂದ್ರ!
ದುರಂತದಲ್ಲಿ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಬೋಟ್ಗಳನ್ನು ದುರಸ್ತಿ ಮತ್ತು ಪೇಂಟಿಂಗ್ ಕಾರ್ಯಕ್ಕೆ ದಡದಲ್ಲಿ ಇರಿಸಲಾಗಿತ್ತು. ಬೋಟ್ಗಳ ಮೇಲೆ ತೆಂಗಿನ ಗರಿಗಳನ್ನು ಹಾಸಲಾಗಿತ್ತು. ಆರಂಭದಲ್ಲಿ ಬೋಟ್ ಮೇಲೆ ಹಾಸಿದ್ದ ತೆಂಗಿನ ಗರಿಗಳಿಗೆ ಬೆಂಕಿ ತಗುಲಿದೆ. ಬಳಿಕ ಬೋಟ್ಗಳಿಗೆ ವ್ಯಾಪಿಸಿದ್ದು ಭಾರೀ ಪ್ರಮಾಣದ ಅಗ್ನಿ ಅವಘಡಕ್ಕೆ ಕಾರಣವಾಗಿದೆ. ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.