ಧಾರವಾಡ: ಕಂಟೇನರ್ ಲಾರಿವೊಂದರಲ್ಲಿ ಇದಕ್ಕಿಂದಂತೆ ಬೆಂಕಿ ಹೊತ್ತಿಕೊಂಡು ರಸ್ತೆಯ ಮಧ್ಯೆ ಹೊತ್ತಿ ಉರಿದಿರುವ ಘಟನೆ ಧಾರವಾಡ ಹೊರವಲಯದ ಮಂಡಿಹಾಳ ಗ್ರಾಮದ ಕ್ರಾಸ್ ಬಳಿ ಮಧ್ಯ ರಾತ್ರಿ ನಡೆದಿದೆ.
ಧಾರವಾಡ ಗೋವಾ ರಸ್ತೆಯ ಮಂಡಿಹಾಳ ಗ್ರಾಮದ ಕ್ರಸ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಬೆಂಕಿಯ ನರ್ತನಕ್ಕೆ ಲಾರಿ ಸಂಪೂರ್ಣ ಸುಟ್ಟು ಹೋಗಿದೆ. ಗೋವಾದಿಂದ ಧಾರವಾಡಕ್ಕೆ ಈ ಕಂಟೇನರ್ ಲಾರಿ ಬರುತ್ತಿತ್ತು ಎಂದು ತಿಳಿದು ಬಂದಿದೆ. ಧಾರವಾಡ ತಾಲೂಕಿನ ಮಂಡಿಹಾಳ ಗ್ರಾಮದ ಹತ್ತಿರ ಬರುತ್ತಿದಂತೆ ಇದಕ್ಕಿದಹಾಗೇ ಲಾರಿಯಲ್ಲಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಕೂಡಲೇ ಲಾರಿಯ ಚಾಲಕ ತನ್ನ ವಾಹನವನ್ನು ರಸ್ತೆ ಪಕ್ಕ ನಿಲ್ಲಿಸಿ ಹೊರ ಬಂದಿದ್ದಾನೆ. ರಸ್ತೆಯಲ್ಲಿ ಧಗ ಧಗನೆ ಹೊತ್ತಿ ಉರಿಯುತ್ತಿರುವುದನ್ನು ನೋಡಿದ ಸ್ಥಳೀಯ ವಾಹನ ಸವಾರರಲ್ಲಿ ಕೆಕಾಲ ಆತಂಕದ ವಾತವರಣ ಸೃಷ್ಟಿಯಾಗಿತ್ತು. ಚಾಲಕನ ಮಾಹಿತಿ ಮೇರೆಗೆ ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರು ಭೇಟ್ಟಿ ನೀಡಿ ಬೆಂಕಿ ನಂದಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.