ಬೆಂಗಳೂರು;- ಸಿಲಿಂಡರ್ ಸ್ಫೋಟದಿಂದ ಥರ್ಮಾಕೋಲ್ ಗೋದಾಮಿನಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿರುವ ಘಟನೆ ಚಾಮರಾಜಪೇಟೆಯ ಆನಂದಪುರದಲ್ಲಿರುವ ಥರ್ಮಾಕೋಲ್ ಗೋದಾಮಿನಲ್ಲಿ ಸಂಭವಿಸಿದೆ
ಗೋದಾಮಿನಲ್ಲಿ ಡಿಸೈನ್ ಕೆಲಸ ಮಾಡಲಾಗುತ್ತಿತ್ತು. ಸುತ್ತಮುತ್ತಲೂ ಶೀಟ್ ಹಾಕಿದ್ದ ಮನೆಗಳಿದ್ದವು. ಗೋದಾಮಿನಲ್ಲಿ ಹೊತ್ತಿಕೊಂಡಿದ್ದ ಬೆಂಕಿ ಅಕ್ಕಪಕ್ಕದ ಆರೇಳು ಮನೆಗಳಿಗೆ ವಿಸ್ತರಿಸಿದೆ.

ಇದೇ ವೇಳೆ ಸ್ಥಳದಲ್ಲಿದ್ದ ಐದು ಗ್ಯಾಸ್ ಸಿಲಿಂಡರ್ ಗಳ ಪೈಕಿ ಮೂರು ಸಿಲಿಂಡರ್ಗಳು ಸ್ಫೋಟಗೊಂಡಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆದರೆ ಆ ಸಂದರ್ಭದಲ್ಲಿ ರಸ್ತೆಯಲ್ಲಿ ತೆರಳುತ್ತಿದ್ದ ಅಸೀಫ್ ಉಲ್ಲಾ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಲ ಮನೆಗಳು ಸುಟ್ಟ ಭಸ್ಮವಾಗಿದ್ದು, ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು, ಮನೆಗಳ ಮುಂದೆ ಪಾರ್ಕ್ ಮಾಡಲಾಗಿದ್ದ ಬೈಕ್ಗಳು ಬೆಂಕಿಗೆ ಆಹುತಿಯಾಗಿವೆ. ಮನೆಯ ಮಾಲೀಕರಾದ ಆಶಾ ಎಂಬುವರು ಗಣೇಶ ಹಬ್ಬಕ್ಕೆಂದು 50 ಸಾವಿರ ರೂಪಾಯಿ ಬಡ್ಡಿ ಸಾಲ ತಂದು ಮನೆಯ ಲಾಕರ್ನಲ್ಲಿ ಇಟ್ಟುಕೊಂಡಿದ್ದರು. ಮನೆಗೆ ಬೆಂಕಿ ಬಿದ್ದ ಪರಿಣಾಮ ಎಲ್ಲವೂ ಸುಟ್ಟು ಹೋಗಿವೆ. ಘಟನಾ ಸ್ಥಳಕ್ಕೆ ಎರಡು ವಾಹನಗಳಲ್ಲಿ ಬಂದಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.
