ಭದ್ರಾವತಿ ಕೆಎಸ್ಆರ್ಟಿಸಿ ಡಿಪೋ ಸಮೀಪ ಇರುವ ಮಂಜುನಾಥ ಸಾಮಿಲ್ ನಲ್ಲಿ ಇಟ್ಟಿದ್ದ ನಾಟಾ ರಾಶಿಗೆ ನಿನ್ನೆ ರಾತ್ರಿ ಬೆಂಕಿ ತಗುಲಿ ಮುಗಿಲೆತ್ತರಕ್ಕೆ ಅಗ್ನಿಯ ಜ್ವಾಲೆ ಹೊಮ್ಮಿತ್ತು, ಬೆಂಕಿ ತೆಂಗಿನಮರಗಳನ್ನ ಸುಟ್ಟು, ಸುತ್ತಮುತ್ತಲಿನ ಗೋಡೆಗಳನ್ನ ಕುಸಿಯುವಂತೆ , ಮತ್ತೆ ಕೆಲವು ಗೋಡೆಗಳು ಬಿರುಕುಬಿಟ್ಟಿದ್ದವು, ಎಲೆಕ್ಟ್ರಾನಿಕ್ ಐಟಂಗಳು ಹೀಟಿಗೆ ಕರಗಿ ಹೋಗಿದ್ದವು, ಸುತ್ತಮುತ್ತಲಿನ ನಿವಾಸಿಗಳ ಮನೆಯಿಂದ ಸಿಲಿಂಡರ್ಗಳನ್ನ ತೆಗೆದು ಸುರಕ್ಷಿತ ಸ್ಥಳಕ್ಕೆ ಸಾಗಿಸದಿದ್ದರೇ, ಏನಾಗುತ್ತಿತ್ತೋ ಏನೋ? ನಿನ್ನೆ ರಾತ್ರಿ 9.30 ರ ಸುಮಾರಿಗೆ ಸಾಮಿಲ್ನ ನಾಟಾ ರಾಶಿಯಿಂದ ಹೊಗೆ ಬರುವುದನ್ನ ಸ್ಥಳೀಯರು ಕಂಡಿದ್ದಾರೆ.
