ಹೆತ್ತವರು ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾರೆ. ಯಾವುದೇ ಕ್ಷಣದಲ್ಲೂ ಮಕ್ಕಳ ರಕ್ಷಣೆಗೆ ಹೆತ್ತವರು ಮುಂದಾಗುತ್ತಾರೆ. ಮಕ್ಕಳು ಕೂಡಾ ಅಷ್ಟೇ ಹೆತ್ತವರಿಗೆ ಕಷ್ಟ ಎದುರಾದರೆ ತಕ್ಷಣ ರಕ್ಷಣೆಗೆ ಧಾವಿಸುತ್ತಾರೆ. ಇದು ಬರೀ ಮನುಷ್ಯರಲ್ಲಿ ಇರುವಂತಹ ಗುಣವಲ್ಲ. ಸಾಕಷ್ಟು ಜೀವರಾಶಿಗಳಲ್ಲಿ ಇಂತಹ ಭಾಂಧವ್ಯ, ಪ್ರೀತಿಯನ್ನು ನೋಡಬಹುದು. ಈ ದೃಶ್ಯವೂ ಅದಕ್ಕೆ ಸಾಕ್ಷಿ. ಮರಿ ಗೊರಿಲ್ಲಾವೊಂದು ಅಮ್ಮನ ರಕ್ಷಣೆಗೆ ಓಡೋಡಿ ಬರುವ ಈ ದೃಶ್ಯ ಖುಷಿ ಮೂಡಿಸದೇ ಇರದು.
ಈ ವೇಳೆ ದೊಡ್ಡ ಗೊರಿಲ್ಲಾವೊಂದು ಇನ್ನೊಂದು ಗೊರಿಲ್ಲಾದ ಮೇಲೆ ದಾಳಿ ಮಾಡುತ್ತದೆ. ಅಷ್ಟರಲ್ಲಿ ಅಲ್ಲಿಗೆ ಮರಿಗಳೂ ಓಡೋಡಿ ಬರುತ್ತವೆ. ಹೀಗೆ ಬರುವ ಒಂದು ಮರಿ ಅಮ್ಮನ ರಕ್ಷಣೆಗೆ ಧಾವಿಸುತ್ತದೆ. ಜತೆಗೆ ಕಾದಾಟದಲ್ಲಿ ತೊಡಗಿರುವ ಗೊರಿಲ್ಲಾದ ಬಳಿ ಬರುತ್ತದೆ. ಅಷ್ಟರಲ್ಲಿ ತಾಯಿ ಕೂಡಾ ತನ್ನ ಕಂದನನ್ನು ಬೆನ್ನ ಮೇಲೆ ಕುಳ್ಳಿರಿಸಿ ಹೋರಾಡುತ್ತಾಳೆ, ದೊಡ್ಡ ಗೊರಿಲ್ಲಾವನ್ನು ಹಿಮ್ಮೆಟ್ಟಿಸುತ್ತಾಳೆ. ಈ ಕದನಕ್ಕಿಂತೂ ಇಲ್ಲಿ ಗಮನ ಸೆಳೆಯುವುದು ಪುಟಾಣಿಯ ಪ್ರೀತಿ. ಒಂದುಚೂರೂ ಯೋಚಿಸದೆ ಈ ಮರಿ ಅಮ್ಮನ ಬಳಿ ಧಾವಿಸಿ ಬಂದಿತ್ತು. ಈ ಪ್ರೀತಿಯನ್ನು ನೋಡುವಾಗಲೇ ಹೃದಯ ತುಂಬಿ ಬರುತ್ತದೆ

