ಚಿತ್ರದುರ್ಗ : ನೀರಿಗಾಗಿ ರಾಜ್ಯ ರಾಜ್ಯಗಳ ಮಧ್ಯೆ ಗಲಾಟೆಯಾಗುತ್ತೆ. ದೇಶ ದೇಶಗಳ ನಡುವೆಯೂ ಕಿತ್ತಾಟ ಆಗುತ್ತೆ. ಇದೀಗ ಇದೇ ನೀರಿನ ವಿಚಾರಕ್ಕೆ ನಡೀಬೇಕಿದ್ದ ಮದುವೆ ನಿಂತಿದೆ.
ಹೌದು, ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಬಲಿಜ ಕಲ್ಯಾಣ ಮಂಟಪದಲ್ಲಿ ಇಂಥ ಘಟನೆ ನಡೆದಿದ್ದು, ರಾತ್ರಿ ಚೆನ್ನಾಗಿ ಆರತಕ್ಷತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಧು ಬೆಳಗ್ಗೆ ತಾಳಿ ಕಟ್ಟುವಾಗ ಮದುವೆ ಬೇಡ ಎಂದಿದ್ದಾಳೆ. ಏಕಾಏಕಿ ವಧು ಮದುವೆ ನಿರಾಕರಣೆ ಮಾಡಿದಕ್ಕೆ ವರ ಕಂಗಾಲಾಗಿದ್ದಾನೆ.
ಪ್ಯಾಲೇಸ್ ನಲ್ಲಿ ಹುಟ್ಟಿದ ಪ್ರೀತಿ ಮಂಟಪದ ವರೆಗೂ… ತಾಳಿ ಕಟ್ಟುವ ವೇಳೆಯಲ್ಲೇ ಗಂಡು ಎಸ್ಕೇಪ್!
ಹಿರಿಯೂರಿನ ಬಲಿಜ ಕಲ್ಯಾಣ ಮಂಟಪದಲ್ಲಿ ಜಗಳೂರು ಮೂಲದ ಮನೋಜ್ ಕುಮಾರ್, ಶಿರಾ ಮೂಲದ ಅನಿತಾ ಮದುವೆ ನಡೆಯುತ್ತಿತ್ತು. ಖಾಸಗಿ ಸಾಫ್ಟ್ವೇರ್ ಕಂಪನಿಯಲ್ಲಿ ಇಂಜಿಯರ್ಗಳಾಗಿರುವ ವಧು-ವರರು ಪರಸ್ಪರ ಒಪ್ಪಿ ಮದುವೆಗೆ ಮುಂದಾಗಿದ್ದರು.
ರಾತ್ರಿ ವರನ ಕಡೆಯವರಿಗೆ ವಧು ಕಡೆಯವರು ಕುಡಿಯಲು ನೀರು ಕೊಡದೆ ಕಿರಿಕ್ ಮಾಡಿದ್ದಾರೆ ಎನ್ನಲಾಗಿದೆ. ನೀರು ಕೊಡದಿದ್ದಕ್ಕೆ ಎರಡು ಕಡೆಯವರ ನಡುವೆ ಜಗಳವಾಗಿ ಮನಸ್ತಾಪವಾಗಿದೆ.̤ ಕುಡಿಯುವ ನೀರಿನ ಜಗಳದ ನೆಪ ಹೊಡ್ಡಿ ಮದುವೆಗೆ ವಧು ನಿರಾಕರಣೆ ಮಾಡಿದ್ದು, ಲಕ್ಷ ಲಕ್ಷ ಖರ್ಚು ಮಾಡಿ ಮದುವೆ ಮಾಡುತ್ತಿದ್ದ ಪೋಷಕರು ಇದೀಗ ಕಂಗಲಾಗಿದ್ದಾರೆ.