ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಮಲ್ಲಪ್ಪನ ಹಳ್ಳಿಯಲ್ಲಿ ಕುರಿ ಹಟ್ಟಿಯಲ್ಲಿದ್ದ 15 ಕುರಿಗಳನ್ನು ರಾತ್ರಿ ಕಳ್ಳರು ಕದ್ದೊಯ್ಯದ ಘಟನೆ ನಡೆದಿದೆ. ಮಲ್ಲಪ್ಪನಹಳ್ಳಿ ಗ್ರಾಮದ ಸಣ್ಣಮ್ಮ ಎನ್ನುವವರಿಗೆ ಸೇರಿದ್ದ ಕುರಿಗಳನ್ನು ಸಣ್ಣಮ್ಮ ಎಂದಿನಂತೆ ಕುರಿ ಹಟ್ಟಿಯಲ್ಲಿ ಕೂಡಿದ್ದರು, ರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ಬಂದಿದ್ದ ಕಳ್ಳರು ಎಲ್ಲಾ ಕುರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಕುರಿ ಮೇಯಿಸಿಕೊಂಡು ಜೀವನ ಮಾಡುತ್ತಿದ್ದ ಸಣ್ಣಮ್ಮನಿಗೆ ದಿಕ್ಕೆ ತೋಚದಾಗಿದ್ದು, ಸುಮಾರು75 ಸಾವಿರ ಮೌಲ್ಯದ ಕುರಿಗಳು ಎಂದು ಸಣ್ಣಮ್ಮ ಹೇಳಿದ್ದು, ಕುರಿ ಕಳವಿನ ಪ್ರಕರಣವೂ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

