ಬೆಂಗಳೂರು: ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿದೆ.
ಭ್ರೂಣ ಹತ್ಯೆಯ ಜಾಲವನ್ನ ಬುಡಸಮೇತ ಕಿತ್ತುಹಾಕಬೇಕಿದೆ. ಮಂಡ್ಯದ ಆಲೆಮನೆ ಹಾಗೂ ಮೈಸೂರಿನ ಮಾತಾ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಭ್ರೂಣ ಹತ್ಯೆ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದೆ..
ಪ್ರಕರಣವನ್ನ ‘ಸಿಐಡಿ’ ತನಿಖೆಗೆ ವಹಿಸಲಾಗಿದ್ದು, ಭ್ರೂಣ ಹತ್ಯೆ ಪ್ರಕರಣದ ತನಿಖೆಗೆ ಆರೋಗ್ಯ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ. ಭ್ರೂಣ ಹತ್ಯೆ ಒಂದು ಸಾಮಾಜಿ ಪಿಡುಗು. ಇದನ್ನು ಕಾನೂನಿನ ಚೌಕಟ್ಟಿನಲ್ಲಿ ಎಷ್ಟು ಮಟ್ಟ ಹಾಕಲು ಸಾಧ್ಯ ಆರೋಗ್ಯ ಇಲಾಖೆ, ಸರ್ಕಾರ ಸಂಪೂರ್ಣವಾಗಿ ಪ್ರಮಾಣಿಕ ಪ್ರಯತ್ನ ನಡೆಸಲಿದೆ.
ಈಗಿರುವ ಕಾನೂನು ಗಳನ್ನ ಇನ್ನಷ್ಟು ಬಿಗಿಗೊಳಿಸುತ್ತೇವೆ. ಆದರೆ ನಮ್ಮ ಸಮಾಜ ಕೂಡ ಬದಲಾಗಬೇಕು. ಹೆಣ್ಣು ಎಂಬ ಒಂದೇ ಕಾರಣಕ್ಕೆ ಭ್ರೂಣ ಹತ್ಯೆ ಮಾಡಿಸುವುದು ಸರಿಯಲ್ಲ. ಭ್ರೂಣ ಹತ್ಯೆ ಮಾಡಿಸುವವರ ವಿರುದ್ಧವು ಕ್ರಮಗಳಾಗಬೇಕು. ನಮ್ಮ ಸಮಾಜ ಕೂಡ ಜಾಗೃತರಾಗಿ ಭ್ರೂಣ ಹತ್ಯೆ ಪಿಡುಗನ್ನ ತೊಡಗಿಸಲು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು.