ಬೆಂಗಳೂರು: ಬೆಂಗಳೂರಿನಲ್ಲಿ ನಿರಂತರ ಕೊರೊನಾ ಸೋಂಕು ಏರಿಕೆ ಹಿನ್ನೆಲೆ ಈ ಬಾರಿ 75ನೇ ಗಣರಾಜ್ಯೋತ್ಸವ ದಿನಾಚರಣೆಗೆ ನಿರ್ಬಂಧ ಹೇರಲಾಗಿದೆ. ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವದ ಮೇಲೂ ಕೊರೊನಾ ಕಾರ್ಮೋಡ ಆವರಿಸಿದ್ದು, ಈ ಮೂಲಕ ಸರಳ ಗಣರಾಜ್ಯೋತ್ಸವ ಆಚರಣೆಗೆ ಒತ್ತು ನೀಡಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿರುವ ಬೆಂಗಳೂರು ಜಿಲ್ಲಾಧಿಕಾರಿ ಜೆ. ಮಂಜುನಾಥ್,
ಸದ್ಯದಲ್ಲೇ ಗಣರಾಜ್ಯೋತ್ಸವಕ್ಕಾಗಿಯೇ ಪ್ರತ್ಯೇಕ ಮಾರ್ಗಸೂಚಿಯನ್ನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆಗೊಳಿಸಲಿವೆ. ಗಣರಾಜ್ಯೋತ್ಸವ ಪೂರ್ವ ಸಿದ್ಧತೆಗಳಿಗೆ ಈಗಾಗಲೇ ಚಾಲನೆ ಕೊಟ್ಟಿದ್ದೇವೆ, ಸಭೆಯನ್ನ ಸಹ ನಡೆಸಿದ್ದು, ಆಯಾ ಸಂಬಂಧಪಟ್ಟ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ ಸೂಚಿಸಲಾಗಿದೆ. ಇನ್ನು, ಶಾಲಾ-ಕಾಲೇಜುಗಳಲ್ಲಿಯೂ ಗಣರಾಜ್ಯೋತ್ಸವ ಆಚರಣೆಗೂ ಪ್ರತ್ಯೇಕ ನಿಯಮಗಳನ್ನ ಜಾರಿ ಮಾಡ್ತೇವೆ ಎಂದಿದ್ದಾರೆ.
