Facebook Twitter Instagram YouTube
    ಕನ್ನಡ English తెలుగు
    Thursday, November 30
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ಗದಗ: ತಂದೆ ಕುಡಿತದ ಚಟಕ್ಕೆ ಹಸುಗೂಸಿನ ಪ್ರಾಣಕ್ಕೆ ಕುತ್ತು – ಮಾನವೀಯತೆ ಮೆರೆದ ಪೊಲೀಸರು

    AIN AuthorBy AIN AuthorNovember 17, 2023
    Share
    Facebook Twitter LinkedIn Pinterest Email

    ಗದಗ: ಕುಡಿದ ಮತ್ತಿನಲ್ಲಿ ತಂದೆಯೇ ಹಸುಗೂಸನ್ನು ಹೊತ್ತು ತಂದು ಅಮಾನವೀಯವಾಗಿ ವರ್ತಿಸಿದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

    ಕಳೆದ ಒಂದು ವಾರದ ಹಿಂದೆ ಗದುಗಿನ ಖಾಸಗಿ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಮಗುವಿನ ತಾಯಿ ಗದಗ ತಾಲೂಕಿನ ಡಂಬಳ ಗ್ರಾಮ ಮತ್ತು ತಂದೆ ಸವಣೂರ ತಾಲೂಕಿನ ಕೃಷ್ಣಾಪುರದವರಾಗಿದ್ದು ಇಬ್ಬರೂ ಪ್ರೇಮ ವಿವಾಹವಾಗಿದ್ದು. ಯಾವುದೋ ಕಾರಣಕ್ಕೆ ಗಂಡ ಹೆಂಡತಿಯ ನಡುವೆ ಮನಸ್ಥಾಪ ಆಗಿ ಗಂಡ ಹಸುಗೂಸನ್ನು ಎತ್ತಿಕೊಂಡು ಗದಗದಿಂದ ತನ್ನೂರಿಗೆ ಹೋಗುವಾಗ ಲಕ್ಷೇಶ್ವರ ಪಟ್ಟಣಕ್ಕೆ ಬಂದಿದ್ದಾನೆ.

    Demo

    ಲಕ್ಷೇಶ್ವರ ಬಸ್ ನಿಲ್ದಾಣದಲ್ಲಿ ವೃದ್ಧೆಯೋರ್ವರ ಕೈಯಲ್ಲಿ ಕೂಸನ್ನು ಕೊಟ್ಟು ಮದ್ಯ ಕುಡಿಯಲು ಹೋಗಿದ್ದನಂತೆ. ಈ ವೇಳೆ ತಾನು ಹೋಗುವ ಬಸ್ ಬಂದ ಹಿನ್ನಲೆ ವೃದ್ಧೆ ಕೂಸನ್ನು ಅಲ್ಲಿಯೇ ಬಿಟ್ಟು ಬಸ್ ಹತ್ತಿದ್ದಾಳೆ. ವಾಪಸ್ ಬಂದ ಪಾಪಿ ತಂದೆ ಕೂಸನ್ನು ಎತ್ತಿಕೊಂಡು ಹಸುಗೂಸಿನ ಪ್ರಜ್ಞೆಯೂ ಇಲ್ಲದೇ ರಸ್ತೆಯುದ್ದಕ್ಕೂ ಜೋತಾಡಿಸಿದ್ದಾನೆ. ತಾಯಿಯಿಂದ ಬೇರ್ಪಟ್ಟ ಕೂಸು ಹಸಿವು, ನೋವಿನಿಂದ ಕಿರಚಾಡಿದೆ.

    ಇದನ್ನು ಕಂಡು ಮಕ್ಕಳ ಕಳ್ಳನೆಂದು ಭಾವಿಸಿದ ಸಾರ್ವಜನಿಕರು ಕೂಸು ಸಹಿತ ವ್ಯಕ್ತಿಯನ್ನು ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್, ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿಗಳು ಕೂಸಿನ ಪ್ರಾಣಾಪಾಯದಿಂದ ಪಾರು ಮಾಡಿ ಕರ್ತವ್ಯಪ್ರಜ್ಞೆ ಜೊತೆಗೆ ಮಾನವೀಯತೆ ಮೆರೆದಿದ್ದಾರೆ.

    ಪರಿಶೀಲನೆ ನಡೆಸಲಾಗಿ ಈತ ಹಸುಗೂಸಿನ ತಂದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಪಿಎಸ್‌ಐ ಯೂಸೂಫ್ ಜಮಾಲಾ, ಪೊಲೀಸ್ ಸಿಬ್ಬಂದಿಗಳು, ಡಾ. ಶ್ರೀಕಾಂತ ಕಾಟೇವಾಲೆ, ಡಾ. ಅಬ್ದುಲ್ ಮಳಗಿ ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕ ಹಾಗೂ ದತ್ತು ಕೆಂದ್ರದ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


    Share. Facebook Twitter LinkedIn Email WhatsApp

    Related Posts

    ಧಾರವಾಡ ಜಿಲ್ಲಾಸ್ಪತ್ರೆ ಲೋಕಾಯುಕ್ತ ನ್ಯಾಯಮೂರ್ತಿ ಭೇಟಿ: ಕಾರ್ಯವೈಖರಿ ಕಂಡು ತೀವ್ರ ಅಸಮಾಧಾನ

    November 30, 2023

    ಕರ್ನಾಟಕ ಜನದರ್ಶನ ವೇದಿಕೆ ಸಂಘಟನೆ ಕಲಬುರ್ಗಿ ವಿಭಾಗೀಯ ಅಧ್ಯಕ್ಷ ಭೈರಣ್ಣ ಅಂಬಿಗೇರ ಉಚ್ಚಾಟನೆ

    November 30, 2023

    Kalaburagi: ಲೋಕ ಕಲ್ಯಾಣಕ್ಕಾಗಿ ಪ್ರತ್ಯಂಗಿರ ಹೋಮ: ಪ್ರಣವಾನಂದ ಶ್ರೀ

    November 30, 2023

    ಕಾಂತರಾಜು ವರದಿ ಬೇಡ: ರಕ್ತದಲ್ಲಿ ಸಹಿ ಸಂಗ್ರಹ – ವೀರಶೈವ ಮಹಾಸಭಾ

    November 30, 2023

    Hubli: ಡಾ.ರಮೇಶ ಮಹಾದೇವಪ್ಪನವರಿಗೆ ಸನ್ಮಾನ

    November 30, 2023

    Kalaburagi: ತಾತನ ಮರ್ಡರ್ ಕೇಸ್: ಮೊಮ್ಮಗ & ತಾಯಿ ಅಂದರ್

    November 30, 2023

    ಈದ್ಗಾ ಮೈದಾನದಲ್ಲಿ ಕನಕ ಜಯಂತಿ ಆಚರಣೆಗೆ ತಾರತಮ್ಯ: ಉಗ್ರ ಹೋರಾಟದ ಶ್ರೀರಾಮ ಸೇನೆ ಎಚ್ಚರಿಕೆ

    November 30, 2023

    Vijayanagara: ವಿಜಯನಗರದಲ್ಲಿ ನಕಲಿ ವೈದ್ಯರ ಕ್ಲಿನಿಕ್’ಗಳ ಮೇಲೆ ದಾಳಿ

    November 30, 2023

    ಹೆಲ್ಮೆಟ್ ಧರಿಸಿ ಒಂಟಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡ್ತಿದ್ದ ಆರೋಪಿ..! ವಿಡಿಯೋ ವೈರಲ್

    November 30, 2023

    ಲಿಟ್ಲ್‌ ಮಾಸ್ಟರ್ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟದ ಕಲರವ: ಪ್ರಶಸ್ತಿ ಪಡೆದು ಮಿಂಚಿದ ಶಾಲಾ ವಿದ್ಯಾರ್ಥಿಗಳು

    November 30, 2023

    Chitradurga: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 8 ಕೋಟಿ ಜಪ್ತಿ

    November 30, 2023

    Ramesh Jigajinagi: ನೋಡೋದಕ್ಕೆ ಆ ಮಾಗಡಿ ಶಾಸಕನೇ ಬ್ರಿಟಿಷ ಇದ್ದಂಗೆ ಅದಾನ: ರಮೇಶ ಜಿಗಜಿಣಗಿ

    November 30, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.