ಹೈದರಾಬಾದ್: ಮಕ್ಕಳು ಚೆನ್ನಾಗಿ ಓದುತ್ತಿಲ್ಲ ಎಂದು ಇಬ್ಬರು ಮಕ್ಕಳನ್ನು ಕೊಂದು ತಂದೆಯೂ ಆತ್ಮಹತ್ಯೆ ಮಾಡಿಕೊಂಡಿರುವ ಅಘಾತಕಾರಿ ನಡೆದಿದೆ. ಆಂಧ್ರಪ್ರದೇಶದ ಕಾಕಿನಾಡದಲ್ಲಿ ಇಂಥ ಶಾಕಿಂಗ್ ಘಟನೆ ನಡೆದಿದೆ.
ಒಎನ್ಜಿಸಿ ಉದ್ಯೋಗಿಯಾಗಿದ್ದ 37 ವರ್ಷದ ಚಂದ್ರಶೇಖರ್ ಇಬ್ಬರು ಅಪ್ರಾಪ್ತ ಪುತ್ರರನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳ ಓದಿನ ಬಗ್ಗೆ ಚಂದ್ರಶೇಖರ್ಗೆ ತೀವ್ರ ನಿರಾಶೆಯಾಗಿತ್ತು. . ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡದಿದ್ದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದೆ ಕಷ್ಟವಾಗಲಿದೆ ಎಂದು ಭಾವಿಸಿ ಮಕ್ಕಳನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಶುಕ್ರವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ತಂದೆ ಚಂದ್ರ ಕಿಶೋರ್ ಇಬ್ಬರು ಬಾಲಕರನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಸದ್ಯ ಪೊಲೀಸರು ಡೆತ್ನೋಟ್ ವೊಂಧನ್ನು ವಶಪಡಿಸಿಕೊಂಡಿದ್ದಾರೆ. ವಿಧಿವಿಜ್ಞಾನ ತಂಡ ಮನೆಗೆ ಆಗಮಿಸಿ ಪರಿಶೀಲಿಸಿದೆ. ಈ ಘಟನೆಗೆ ನಿಖರವಾದ ಕಾರಣಗಳನ್ನು ಪತ್ತೆ ಹಚ್ಚಲು ತನಿಖೆ ಆರಂಭವಾಗಿದೆ. ಕಿಶೋರ್ ಅವರ ಪತ್ನಿಯ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಾಗಿದೆ. ಪತಿ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ ಮಕ್ಕಳು ಬಕೆಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.