ಬೆಂಗಳೂರು: ಅದು ಕಾರು ಪಾರ್ಕಿಂಗ್ ವಿಚಾರಕ್ಕೆ ನಡೆದ ಸಣ್ಣ ಜಗಳ.. ಕೂತು ಮಾತಾಡಿದ್ರೆ ಏನೂ ಆಗ್ತಿರಲಿಲ್ಲ.. ಆದ್ರೆ ಮಾತಿಗೆ ಮಾತು ಬೆಳೆದು ಜಗಳ ಜೋರಾದ ಎಫೆಕ್ಟ್ ವೃದ್ಧನೊಬ್ಬ ಐಸಿಯು ಸೇರಿದ್ದಾನೆ.. ಸೊಸೆ ತಂದ ಜಗಳದಲ್ಲಿ ಎಂಟ್ರಿ ಆಗಿದ್ದ ಮಾವ ಈಗ ಸಾವು-ಬದುಕಿನ ಮಧ್ಯೆ ಹೋರಾಟ ಮಾಡ್ತಿದ್ದಾನೆ..ಅಷ್ಟಕ್ಕೂ ಆಗಿದ್ದೇನು..? ಹೇಳ್ತೀವಿ ನೋಡಿ..
ಹೌದು.. ಸೊಸೆ ತಂದ ಜಗಳದಿಂದ ಮಾವನೊಬ್ಬ ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಯೊಂದರ ಐಸಿಯು ಸೇರಿರೋ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಭಾವಿ ಬಳಿಯ ವಿನಾಯಕ್ ನಗರದಲ್ಲಿ ನಡೆದಿದೆ.. ನಿನ್ನೆ ಮಧ್ಯಾಹ್ನ ಪಾರ್ಕಿಂಗ್ ವಿಚಾರದಲ್ಲಿ ಎದುರಗಡೆ ಮನೆಯವರ ಜೊತೆ ವಾದಕ್ಕಿಳಿದಿದ್ದ ಸೊಸೆಯ ಪರ ಧ್ವನಿ ಎತ್ತಿದ್ದ ಮಾವ ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದಾರೆ..
ಅಂದ್ಹಾಗೆ ಈ ಘಟನೆಯಲ್ಲಿ ಆಸ್ಪತ್ರೆ ಸೇರಿರೋ ವೃದ್ದ ಇವ್ರೇ ನೋಡಿ.. ಇವ್ರೆಸ್ರು ದಳಪತಿ ಅಂತಾ.. 70ವರ್ಷದ ದಳಪತಿ ವೃತ್ತಿಯಲ್ಲಿ ವಕೀಲರು.. ನಿನ್ನೆ ಎಂದಿನಂತೆ ಕೋರ್ಟ್, ಕಚೇರಿ ಕೆಲಸ ಮುಗಿಸಿಕೊಂಡು ಆಗ ತಾನೆ ಮನೆಗೆ ಬರ್ತಿದ್ರು.. ಮನೆಗೆ ಬರ್ತಿದ್ದಾಗಲೇ ಮನೆ ಮುಂದೆ ಸೊಸೆ ಮತ್ತು ಎದುರುಗಡೆ ಮನೆಯ ಆರೋಪಿ ರಾಘವೇಂದ್ರ ಜಗಳವಾಡ್ತಿದ್ರು.. ಈ ವೇಳೆ ಸೊಸೆ ಪರವಾಗಿ ರಾಘವೇಂದ್ರ ಜೊತೆ ಜಗಳಕ್ಕೆ ನಿಂತ ದಳಪತಿ ಮಾತಿಗೆ ಮಾತು ಬೆಳಸಿದ್ದ..
ಇದೇ ಗ್ಯಾಪ್ ನಲ್ಲಿ ಸೊಸೆ ಕಿಚನ್ ಗೆ ಹೋದಾಕೆ ಚಾಕು ತಂದು ಮಾವನ ಬಳಿ ಎಸೆದಿದ್ಳಂತೆ.. ಆದ್ರೆ ಆ ಚಾಕು ಕೆಳಗಡೆ ಬಿದ್ದಾಗ ದಳಪತಿ ತೆಗೆದುಕೊಳ್ಳುವಷ್ಟರಲ್ಲಿ ಆರೋಪಿ ರಾಘವೇಂದ್ರನೇ ಚಾಕು ತೆಗೆದುಕೊಂಡು ದಳಪತಿಯವ್ರ ಬೆನ್ನಿಗೆ ಇರಿದು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.. ಪರಿಣಾಮ ತೀವ್ರ ರಕ್ತಸ್ರಾವವಾಗಿ ಗಾಯಗೊಂಡಿದ್ದ ದಳಪತಿಯನ್ನ ನಾಗರಭಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ..
ಇನ್ನು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ಕೂಡಲೇ ಆರೋಪಿ ಹುಡುಕಾಟಕ್ಕೆ ಮುಂದಾಗಿದ್ದ ಪೊಲೀಸ್ರು ಆರೋಪಿ ರಾಘವೇಂದ್ರನನ್ನ ಬಂಧಿಸಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.. ದಳಪತಿ ಮತ್ತು ಆರೋಪಿ ಇಬ್ಬರ ಮಧ್ಯೆಯೂ ಒಂದಷ್ಟು ಹಣದ ವ್ಯವಹಾರ ಕೂಡ ಇತ್ತು ಎನ್ನಲಾಗಿದೆ.. ಸದ್ಯ ತನಿಖೆ ನಡೀತಿದ್ದು ಅಸಲಿಗೆ ಯಾವ ವಿಚಾರಕ್ಕೆ ಗಲಾಟೆ ಆಗಿದ್ದು..? ಏನು ಅನ್ನೋದು ತನಿಖೆ ನಂತರವೇ ಗೊತ್ತಾಗ್ಬೇಕು..