ಬೆಂಗಳೂರು:- ಅಪಘಾತದಲ್ಲಿ ಫ್ಯಾಷನ್ ಡಿಸೈನರ್ ಸಾವು ಕೇಸ್ ಗೆ ಸಂಬಂಧಿಸಿದಂತೆ ಜಾಮೀನಿಗಾಗಿ ಆರೋಪಿಯು ಹೈಕೋರ್ಟ್ ಮೆಟ್ಟಿಲೇರಿದ್ದಾನೆ.
ಹೊಟ್ಟೆ ಕೊಬ್ಬು ಕರಗಿಸಲು ಕೇವಲ ವಾಕಿಂಗ್ ಸಾಕಾ!? ನಿಮ್ಮ ಗೊಂದಲಕ್ಕಿದೆ ಇಲ್ಲಿ ಉತ್ತರ!
ಸಾಮಾನ್ಯವಾಗಿ ಅಪಘಾತ ಪ್ರಕರಣದಲ್ಲಿ ಸ್ಟೇಷನ್ ಕೋರ್ಟ್ನಲ್ಲಿ ಬೇಲ್ ಸಿಗುತ್ತೆ. ಆದರೆ, ಸೆಷನ್ಸ್ ಕೋರ್ಟ್ನಲ್ಲೂ ಧನುಷ್ ಜಾಮೀನು ಅರ್ಜಿ ವಜಾಗೊಂಡಿದೆ. ಒಂದು ವೇಳೆ ಬಂಧನವಾದರೂ ಮ್ಯಾಜಿಸ್ಟೇಟ್ ಕೋರ್ಟ್ನಲ್ಲಿ ಜಾಮೀನು ಸಿಗುತ್ತೆ. ಆದರೆ, ಸಂಧ್ಯಾ ಅಪಘಾತ ಪ್ರಕರಣದಲ್ಲಿ ಆರೋಪಿ ಧನುಷ್ಗೆ ಒಂದು ತಿಂಗಳಾದರೂ ಜಾಮೀನು ಸಿಕ್ಕಿಲ್ಲ. ಹೀಗಾಗಿ ಧನುಷ್ ಹೈಕೋರ್ಟ್ ಮೆಟ್ಟಿಲು ಏರಿದ್ದಾನೆ.
ಘಟನೆ ಹಿನ್ನೆಲೆ,
ಫ್ಯಾಷನ್ ಡಿಸೈನರ್ ಆಗಿದ್ದ ಮೃತ ಸಂಧ್ಯಾ ಅವರು ಬಟ್ಟೆ ಅಂಗಡಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಶನಿವಾರ (ನವೆಂಬರ್ 02) ರಂದು ಕೆಲಸ ಮುಗಿಸಿ ರಾತ್ರಿ 7 ಗಂಟೆ ಸುಮಾರಿಗೆ ಕೆಂಗೇರಿ ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದರು. ಈ ವೇಳೆ ಮದ್ಯದ ಅಮಲಿನಲ್ಲಿ ಬೆಂಜ್ ಕಾರು ಚಲಾಯಿಸಿಕೊಂಡು ಬಂದ ಧನುಷ್ ಕೆಂಗೇರಿ ಬಸ್ ನಿಲ್ದಾಣದ ಬಳಿ ಬಂದಾಗ ಹಂಪ್ ಅನ್ನೂ ಎಗರಿಸಿ ಸಂಧ್ಯಾ ಅವರಿಗೆ ಡಿಕ್ಕಿ ಹೊಡೆದಿದ್ದನು. ಈ ವೇ ಳೆ ಸಂದ್ಯಾ ಸಾವನ್ನಪ್ಪಿದರು.