ಧಾರವಾಡ: ನಾವು ಕಷ್ಟಪಟ್ಟ ಕಬ್ಬಿನ ಬೆಳೆಯನ್ನು ನಮ್ಮಗೆ ಬೇಕಾದ ಸಕ್ಕರೆ ಕಂಪನಿಗಳಿಗೆ ಮಾರಾಟ ಮಾಡಲು ಅನುಮತಿ ನೀಡಬೇಕು ಎಂದು ಅಗ್ರಹಿಸಿ, ಧಾರವಾಡದಲ್ಲಿ ಅಳ್ಳಾವಾರ ಕಬ್ಬು ಬೆಳೆದ ರೈತರು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡರು. ಸುಮಾರು ಮೂವತೈದಕ್ಕೂ ಹೆಚ್ಚು ರೈತರು ಜಿಲ್ಲಾಧಿಕಾರಿ ಕಚೇರಿಗೆ ಬಂದು, ತಮ್ಮ ಬೇಡಿಕೆ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾರಿಸಿ ಮನವಿ ಮಾಡಿಕೊಂಡರು.
ಈಗಾಗಲೇ ಕಡಿಮೆ ಮಳೆ ಮತ್ತು ನೀರಿನ ಕೊರತೆಯಿಂದಾಗಿ ಕಬ್ಬಿನ ಬೆಳೆಯಲ್ಲಿ ಕುಂಠಿತವಾಗಿದೆವಾಗಿ ನಮ್ಮ ಭಾಗದ ಕಬ್ಬು ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ಜೊತೆಗೆ ಅಳ್ಳಾವಾರ ಗ್ರಾಮಗಳಲ್ಲಿನ ಕಬ್ಬಿನ ಬೆಳೆಯನ್ನು ಇಐಡಿ ಪ್ಯಾರಿ ಸಕ್ಕರೆ ಪ್ಯಾಕ್ಟರಿಗೆ ಹಂಚಿಕೆ ಮಾಡಲಾಗಿದೆ. ಪ್ರಸ್ತುತ ಇಐಡಿ ಪ್ಯಾರಿ ಫ್ಯಾಕ್ಟರಿ ರೈತರ ಜೊತೆಗೆ ದ್ವಿಪಕ್ಷೀಯ ಯಾವುದೇ ಒಡಂಬಡಿಕೆ ಮಾಡಿಕೊಂಡಿಲ್ಲ. ಹಾಗಾಗಿ ನಾವೆಲ್ಲರೂ ಕಳೆದ 20 ವರ್ಷಗಳಿಂದ ನಮ್ಮಗೆ ಬೇಕಾದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬನ್ನು ಕಳುಹಿಸುತ್ತಾ ಬಂದಿದ್ದೇವೆ.
ಇಐಡಿ ಪ್ಯಾರಿ ಸಕ್ಕರೆ ಫ್ಯಾಕ್ಟರಿಯ ಕೆಲವು ಕ್ರಮಗಳು ರೈತರಿಗೆ ಸರಿ ಹೋಗುತ್ತಿಲ್ಲ. ಈ ಫ್ಯಾಕ್ಟರಿಯಲ್ಲಿ ನಮ್ಮ ಕಬ್ಬಿಗೆ ಬಿಲ್ ಕಡಿಮೆ ಸಿಗುತ್ತಿದ್ದು, ಇದರಿಂದ ರೈತರಿಗೆ ಹಾನಿಯಾಗುತ್ತಿದೆ. ಹಾಗಾಗಿ ನಮ್ಮ ಕಬ್ಬನ್ನು ನಾವು ಯಾವ ಕಾರ್ಖಾನೆಗೆ ಬೇಕಾದರು ಕಳಹಿಸಿ ಕೊಡುವ ನಿಟ್ಟಿನಲ್ಲಿ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ನಮ್ಮ ಬೇಡಿಕೆಗೆ ಸ್ಪಂದನೆ ಸಿಗದಿದ್ದರೆ ನಾವು ಉಗ್ರ ಹೋರಾಟದ ಕಡೆ ಚಿಂತನೆ ಮಾಡಬೇಕಾಗುತ್ತದೆ ಎಂದು ಇದೆವೇಳೆ ಎಚ್ಚರಿಕೆ ನೀಡಿದರು.