ಖ್ಯಾತ ಹಿರಿಯ ನಟಿ ಮತ್ತು ಸಂಗೀತ ಕ್ಷೇತ್ರದಲ್ಲೂ ಸಾಕಷ್ಟು ಹೆಸರು ಮಾಡಿರುವ ಮಲೆಯಾಳಂನ (Malayalam) ಆರ್.ಸುಬ್ಬಲಕ್ಷ್ಮಿ (R.Subbalakshmi) ನಿಧನರಾಗಿದ್ದಾರೆ (Passed away). 87ರ ವಯಸ್ಸಿನ ಈ ಹಿರಿ ಜೀವ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸಿನಮಾ ರಂಗದಲ್ಲಿ ಮಾತ್ರವಲ್ಲ, ಚಿತ್ರಕಲೆ ಮತ್ತು ಸಂಗೀತ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಸುಬ್ಬಲಕ್ಷ್ಮಿ.
ಮಲಯಾಳಂನ ಅನೇಕ ಸ್ಟಾರ್ ನಟರ ಜೊತೆಗೆ ಕೆಲಸ ಮಾಡಿದ್ದ ಸುಬ್ಬಲಕ್ಷ್ಮಿ ಅವರು, ಇತ್ತೀಚಿನ ದಿನಗಳಲ್ಲಿ ಅಜ್ಜಿ ಪಾತ್ರಕ್ಕೆ ಫಿಕ್ಸ್ ಆಗಿದ್ದರು. ಸಾಕಷ್ಟು ಚಿತ್ರಗಳಲ್ಲಿ ಅಜ್ಜಿಯಾಗಿಯೇ ಫೇಮಸ್ ಆದವರು. ಪಾಂಡಿಪ್ಪ, ನಂದನಂ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದ್ದು.
ನಟಿಯ ನಿಧನಕ್ಕೆ ನಟರು ಮಾತ್ರವಲ್ಲ, ಕೇರಳದ ಮುಖ್ಯಮಂತ್ರಿಗಳು ಕೂಡ ಸಂತಾಪ ಸೂಚಿಸಿದ್ದಾರೆ. ಸಿನಿಮಾ ರಂಗದ ಕಲಾವಿದರು ಮತ್ತು ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ.