ಹುಬ್ಬಳ್ಳಿ: ಮನೆಯಲ್ಲಿನ ಕೌಟುಂಬಿಕ ಸಮಸ್ಯೆ ಜಗಳದವರೆಗೆ ಹೋಗಿ, ಕೊನೆಗೆ ಕೋಪಗೊಂಡ ಮೈದುನ ಅತ್ತಿಗೆಯ ಕುತ್ತಿಗೆಗೆ ಚಾಕು ಇರಿದು ಕೊಲೆ ಮಾಡಿರುವ ಪ್ರಕರಣ ಇಲ್ಲಿನ ಎಸ್. ಎಂ. ಕೃಷ್ಣನಗರದಲ್ಲಿ ಭಾನುವಾರ ತಡ ರಾತ್ರಿ ನಡೆದಿದೆ. ಸಾಜೀದಾ ನಾಲಬಂದ (38) ಕೊಲೆಯಾದ ಮಹಿಳೆ. ಅವರ ಪತಿ ಮಹ್ಮದ್ ಹನೀಫ್ ಗಾಯಗೊಂಡಿದ್ದು, ಕೆಎಂಸಿ.ಆರ್ಐಗೆ ದಾಖಲಿಸಲಾಗಿದೆ. ಮೈದುನ ನಾಸೀರ್ ನಾಲಬಂದ ಕೊಲೆ ಮಾಡಿದ ಆರೋಪಿ ಆಗಿದ್ದು,
ರೈತರೇ ಗಮನಿಸಿ.. ಬಿಳಿ ಸೇವಂತಿಗೆ ಬೆಳೆದರೆ ಒಂದು ಎಕರೆಗೆ 5 ಲಕ್ಷ ರೂ. ಲಾಭ!
‘ಮನೆಯಲ್ಲಿ ಅಣ್ಣ, ತಮ್ಮ ಅತ್ತಿಗೆ ಮೂವರು ವಾಸವಾಗಿದ್ದು, ಆಗಾಗ ಅವರ ನಡುವೆ ಜಗಳಗಳು ಆಗುತ್ತಿದ್ದವು. ಭಾನುವಾರ ಸಹ ಜಗಳ ನಡೆದಿದ್ದು, ಅದು ವಿಕೋಪಕ್ಕೆ ಹೋದ ಪರಿಣಾಮ ಮೈದುನ ಅತ್ತಿಗೆಗೆ ಚಾಕು ಇರಿದಿದ್ದಾನೆ. ತೀವ್ರ ಗಾಯಗೊಂಡಿದ್ದ ಸಾಜೀದಾ ಅವರನ್ನು ಕೆಎಂಸಿ-ಅರ್ಐಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸಿಪಿ ಮಹಾನಿಂಗ ನಂದಗಾವಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಈ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.