ಹುಬ್ಬಳ್ಳಿ: ಚೀನಾದ ಹೈಬ್ರಿಡ್ ಬೆಳ್ಳುಳ್ಳಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಸ್ಥಳೀಯವಾಗಿ ಬೆಳೆದ ಜವಾರಿ ಬೆಳ್ಳುಳ್ಳಿ ದರ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ. ಧಾರವಾಡ ಜಿಲ್ಲೆಯ ಬಹುತೇಕ ರೈತರು ಈಗ ಬೆಳ್ಳುಳ್ಳಿ ಬೆಳೆದು ಕಂಗಾಲಾಗಿದ್ದಾರೆ. ಅದರಲ್ಲೂ ನವಲಗುಂದ ತಾಲ್ಲೂಕಿನ ಬೆಳಹಾರ, ಶಿರಕೋಳ, ಮೊರಬ,
ವಾಟ್ಸ್ ಆ್ಯಪ್ʼನಲ್ಲಿ ಬಂದಿದೆ ಹೊಸ ಫೀಚರ್: Google Pay, Paytm, PhonePe ಸೆಡ್ಡು ಹೊಡೆಯಲು ಪ್ಲಾನ್
ಕುಂದಗೋಳ ತಾಲ್ಲೂಕಿನ ಗುಡಗೇರಿ, ಗೌಡಗೇರಿ, ಹರಲಾಪುರ, ಸಂಕ್ಲೀಪುರ, ಕಳಸ ,ಧಾರವಾಡ ತಾಲ್ಲೂಕಿನ ನರೇಂದ್ರ, ಮುಮ್ಮಿಗಟ್ಟಿ, ನೀರಲಕಟ್ಟಿ, ಗರಗ,ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಿಂಗಾರು ಬೆಳೆಯಾಗಿ ಬೆಳ್ಳುಳ್ಳಿ ಬೆಳೆಯಲಾಗಿದೆ.
ಒಂದೂವರೆ ಎಕರೆಯಲ್ಲಿ ಬೆಳ್ಳುಳ್ಳಿ ಬೆಳೆದಿದ್ದು, ಬೀಜ, ಗೊಬ್ಬರ ಸೇರಿ * 1.30 ಲಕ್ಷ ವೆಚ್ಚ ಮಾಡಿದ್ದೇನೆ.
ಈಗ ದರ ಕುಸಿದಿದ್ದು,ಹಾಕಿದ ಬಂಡವಾಳವೂ ಬಾರದ ಸ್ಥಿತಿ ಇದೆ’ ಕಳೆದ ಮೂರ್ನಾಲ್ಕು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಬೆಳ್ಳುಳ್ಳಿ ಬೆಳೆಗೂ ಸೂಕ್ತ ಧಾರಣಿ ಇಲ್ಲ. ಇದರಿಂದ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ’ ಎಂದರು.