ಬೆಂಗಳೂರು: ಆಭರಣ ಸಿದ್ಧಪಡಿಸಿ ಕೊಡುವುದಾಗಿ ವಂಚಿಸಿದ್ದ ಆರೋಪಿಯನ್ನು ಜಯನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. 63 ವರ್ಷದ ಸುನಿಲ್ ಕುಮಾರ್ ಬೌಲ್ ಬಂಧಿತ ಆರೋಪಿ ಆಗಿದ್ದು, ಜಯನಗರ 5 ನೇ ಹಂತದ ಜ್ವಾಲಾಮಾಲ ಜ್ಯೂವೆಲರ್ಸ್ ಮಾಲೀಕರಿಗೆ 271 ಗ್ರಾಂ ಚಿನ್ನವನ್ನು ಪಡೆದು ವಂಚನೆ ಮಾಡಿದ್ದ ಎಂದು ಹೇಳಲಾಗಿದೆ.
ಈ ಹಿನ್ನೆಲೆ ಜ್ಯೂವೆಲರ್ಸ್ ಕಂಪನಿ ಮಾಲೀಕ ರಾಕೇಶ್ ಬೆಳ್ಳೂರು ಜಯನಗರ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರಿನ ಅನ್ವಯ ವಿಚಾರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಂಧಿತನಿಂದ 55 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
