ಬೆಂಗಳೂರು: ಕಳೆದ ನಾಲ್ಕೈದು ದಿನಗಳ ಹಿಂದೆ ಪಿಸ್ತೂಲು ತೋರಿಸಿ ಯಶವಂತಪುರದ ರಾಬರಿ ಪ್ರಕರಣ ಸಂಬಂಧ ಇದೀಗ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ನವೆಂಬರ್ 29 ರಂದು ಯಶವಂತಪುರದ ವಿಕ್ರಮ್ ಸಿಂಗ್ ಮನೆಯಲ್ಲಿ ದರೋಡೆ ನಡೆದಿದ್ದು, ಇದೀಗ ಇದರ ಹಿಂದೆ ನಟೋರಿಯಸ್ ರೌಡಿ ಉಲ್ಲಾಳ್ ಕಾರ್ತಿಕ್ ಕೈವಾಡ ಇರುವುದು ತಿಳಿದು ಬಂದಿದೆ. ಈ ಪ್ರಕರಣದ ಸಂಬಂಧ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆಯ ವೇಳೆ ರೌಡಿಶೀಟರ್ ಕಾರ್ತಿಕ್ ಗೆ,
ಶಿವಕುಮಾರ್ ಎಂಬ ವ್ಯಕ್ತಿ ವಿಕ್ರಮ್ ಸಿಂಗ್ ಮನೆಯಲ್ಲಿ ಕೋಟಿ ಕೋಟಿ ರೂಪಾಯಿ ಇದೆ ಎಂದು ತಿಳಿಸಿದ್ದ. ಯಾವಾಗ ಕೋಟಿ ವಿಷಯ ಬಂತೋ ಅವಾಗ್ಲೇ ದರೋಡೆ ಮಾಡಲು ಕಾರ್ತಿಕ್ ಪ್ಲ್ಯಾನ್ ಹಾಕಿದ್ದ. ಅದರಂತೆ ಕಾರಿನಲ್ಲಿ ಹೋಗಿ ಪಿಸ್ತೂಲು ತೋರಿಸಿ ಕೇವಲ 50 ಗ್ರಾಂ ಚಿನ್ನಾಭರಣ ಕದ್ದು ಪರಾರಿ ಆಗಿದ್ದರು ಎನ್ನಲಾಗಿದ್ದು, ಸದ್ಯ ಶಿವಕುಮಾರ್ & ಕಾರ್ತಿಕ್ ಎಂಬ ಆರೋಪಿಯ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ. ಅಲ್ಲದೇ ಪ್ರಕರಣದಲ್ಲಿ ಬಂಧಿಸಿದ್ದ ದಿವಾಕರ್ ಪ್ರಮುಖ ಆರೋಪಿ ಅಲ್ವೇ ಅಲ್ಲ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.
