ಸೌತೆಕಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವರು ತಿಳಿದುಕೊಂಡಿರುತ್ತಾರೆ. ಕೆಲವರು ತಮ್ಮ ಡಯಟ್ಗೆಂದು ಸೌತೆಕಾಯಿ ತಿನ್ನುತ್ತಾರೆ. ಸೌತೆಕಾಯಿ ತಿನ್ನುವುದರಿಂದ ಒಳ್ಳೆಯದಾಗುತ್ತದೆ. ಸೌತೆಕಾಯಿ ಒಳ್ಳೆಯದು ಅಂತಾ ಹೆಚ್ಚಾಗಿ ಸೇವನೆ ಮಾಡಿದ್ರೆ ಅದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ನರ್ಸ್ ಮೇಲೆ ಗ್ಯಾಂಗ್ ರೇಪ್: ಖಾಸಗಿ ಅಂಗಕ್ಕೆ ಕೋಲು, ಮೆಣಸಿನ ಪುಡಿ ತುರುಕಿ ಚಿತ್ರಹಿಂಸೆ!
ಕೆಲವು ಜನರು ಡಯಟ್ ಎಂದು ದಿನಕ್ಕೆ 8 ರಿಂದ 10 ಸೌತೆಕಾಯಿ ತಿನ್ನುತ್ತಾರೆ. ಸೌತೆಕಾಯಿ ತಿನ್ನುವುದರಿಂದ ನಮ್ಮ ದೇಹಕ್ಕೆ ಒಳ್ಳೆಯದಾಗುತ್ತೆ. ಆದರೆ ಅವಶ್ಯಕ್ಕಿಂತ ಹೆಚ್ಚು ಸೌತೆಕಾಯಿ ತಿಂದರೆ ಅಮೃತವೂ ವಿಷವಾಗುತ್ತದೆ ಎನ್ನುವ ಗಾದೆ ಮಾತಿನಂತೆ ಸೌತೆಕಾಯಿ ಕೂಡ ವಿಷ ಆಗುತ್ತದೆ.
ಸೌತೆಕಾಯಿ ತಿನ್ನುವುದರಿಂದ ಒಳ್ಳೆಯದಾಗುತ್ತದೆ. ಸೌತೆಕಾಯಿ ಒಳ್ಳೆಯದು ಅಂತಾ ಹೆಚ್ಚಾಗಿ ಸೇವನೆ ಮಾಡಿದ್ರೆ ಅದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಸೌತೆಕಾಯಿ ನಮ್ಮ ದೇಹಕ್ಕೆ ತುಂಬಾ ತುಂಬಾ ಉತ್ತಮವಾದ ತರಕಾರಿ ಅಂತ ಹೇಳಿದರೆ ತಪ್ಪಾಗಲಾರದು.ಹಾಗಂತ ಇದನ್ನು ಹೆಚ್ಚಾಗಿ ಕೂಡ ಸೇವಿಸಿದರೆ ಅನಾರೋಗ್ಯವನ್ನು ಕೂಡ ಉಂಟು ಮಾಡುವ ಸಾಧ್ಯತೆ ಕೂಡ ಇರುತ್ತದೆ
ಇನ್ನೂ ಅತಿಯಾಗಿ ಸೌತೆಕಾಯಿ ತಿನ್ನುವುದರಿಂದ ಆರೋಗ್ಯದ ಮೇಲೆ ಏನೆಲ್ಲಾ ಅಡ್ಡಪರಿಣಾಮ ಬೀರಬಹುದು ಎಂಬುವುದರ ಬಗ್ಗೆ ನಾವಿಂದು ತಿಳಿಯೋಣ.
ಜೀರ್ಣಕ್ರಿಯೆ ಸಮಸ್ಯೆ: ಸೌತೆಕಾಯಿಗಳನ್ನು ತಿನ್ನುವುದರಿಂದ ಕೆಲವರಲ್ಲಿ ಹೊಟ್ಟೆ ಉಬ್ಬುವಿಕೆ ಮತ್ತು ಗ್ಯಾಸ್ಟ್ರಿಕ್ ಸೇರಿದಂತೆ ಅನೇಕ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಏಕೆಂದರೆ ಇದು ವ್ಯಕ್ತಿಯ ದೇಹದಲ್ಲಿ ನೀರಿನ ಅಂಶ ಮತ್ತು ಫೈಬರ್ ಅನ್ನು ಹೆಚ್ಚಿಸುತ್ತದೆ.
ಹೈಪೋಕಲೇಮಿಯಾ: ಸೌತೆಕಾಯಿಯಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದ್ದು, ಇದು ದೇಹದಲ್ಲಿ ಸೋಡಿಯಂ ಮತ್ತು ಪೊಟ್ಯಾಸಿಯಮ್ ಅನುಪಾತವನ್ನು ಅಸಮತೋಲನಗೊಳಿಸುತ್ತದೆ. ಇದು ಸ್ನಾಯು ದೌರ್ಬಲ್ಯ, ಆಯಾಸ ಮತ್ತು ಗೊಂದಲದಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ.
ಚರ್ಮದ ಅಲರ್ಜಿ: ಸೌತೆಕಾಯಿಯಿಂದ ಕೆಲವರಿಗೆ ಅಲರ್ಜಿ ಉಂಟಾಗಬಹುದು. ತುರಿಕೆ, ತುಟಿಗಳು, ನಾಲಿಗೆ ಅಥವಾ ಗಂಟಲಿನ ಊತ, ಉಸಿರಾಟದ ತೊಂದರೆ, ಹೊಟ್ಟೆ ಸೆಳೆತ, ವಾಕರಿಕೆ, ವಾಂತಿ, ಅತಿಸಾರ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ಅನಾಫಿಲ್ಯಾಕ್ಸಿಸ್ನಂತಹ ಚರ್ಮದ ಪ್ರತಿಕ್ರಿಯೆಗಳನ್ನು ಕಾಣಬಹುದು. ಜೊತೆಗೆ ಉಸಿರಾಟದ ಸಮಸ್ಯೆಗಳಂತಹ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಹೃದಯ ಸಮಸ್ಯೆಗಳು: ಸೌತೆಕಾಯಿಯಲ್ಲಿ ಕುಕುರ್ಬಿಟಾಸಿನ್ ಎಂಬ ವಸ್ತುವಿದೆ. ಇದನ್ನು ಅತಿಯಾಗಿ ಸೇವಿಸಿದರೆ ಹೃದಯ ಸಂಬಂಧಿ ಸಮಸ್ಯೆಗಳನ್ನು ಉಂಟಾಗಬಹದು. ಹಾಗಾಗಿ ಈಗಾಗಲೇ ಹೃದ್ರೋಗದಿಂದ ಬಳಲುತ್ತಿರುವವರು ಸೌತೆಕಾಯಿ ಸೇವನೆಯಿಂದ ದೂರವಿರುವುದು ಉತ್ತಮ.
ಕಿಡ್ನಿ ಸಮಸ್ಯೆ: ಸೌತೆಕಾಯಿಗಳನ್ನು ಸೇವಿಸುವುದರಿಂದ ಕೆಲವರಲ್ಲಿ ಹೊಟ್ಟೆ ಉಬ್ಬುವಿಕೆ ಮತ್ತು ಗ್ಯಾಸ್ಟ್ರಿಕ್ನಂತಹ ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಕಿಡ್ನಿ ಸಮಸ್ಯೆ ಇರುವವರು ಹೆಚ್ಚು ಸೌತೆಕಾಯಿಯನ್ನು ಸೇವಿಸಬಾರದು. ಏಕೆಂದರೆ ಇದು ಅವರ ದೇಹದಲ್ಲಿ ನೀರಿನ ಅಂಶ ಮತ್ತು ಪೊಟ್ಯಾಸಿಯಮ್ ಅನ್ನು ಹೆಚ್ಚಿಸುತ್ತದೆ. ಹಾಗಾಗಿ ಇಂತಹವರ ದೇಹಕ್ಕೆ ಸೌತೆಕಾಯಿ ಹಾನಿಕಾರಕವಾಗಿದೆ.
ಗ್ಯಾಸ್ ಸಮಸ್ಯೆ: ಸೌತೆಕಾಯಿಗಳನ್ನು ತಿನ್ನುವ ಧನಾತ್ಮಕ ಅಂಶವೆಂದರೆ ಇದು ಮಲಬದ್ಧತೆಯನ್ನು ತಪ್ಪಿಸಬಹುದು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಸೌತೆಕಾಯಿಗಳನ್ನು ತಿನ್ನುವುದರಿಂದ ಇದು ಗ್ಯಾಸ್ಗೆ ಸಹ ಕಾರಣವಾಗುತ್ತದೆ. ಸೌತೆಕಾಯಿಗಳು ಕುಕರ್ಬಿಟಾಸಿನ್ ಎಂಬ ಅಂಶವನ್ನು ಹೊಂದಿರುತ್ತವೆ. ಇದು ಕುಂಬಳಕಾಯಿ, ಬೂದು ಕುಂಬಳಕಾಯಿ, ಕಲ್ಲಂಗಡಿ ಸೇರಿದಂತೆ ಇತರ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕಂಡುಬರುತ್ತದೆ. ಕ್ಯುಕರ್ಬಿಟಾಸಿನ್ ಸೌತೆಕಾಯಿಗಳಲ್ಲಿ ಕಂಡುಬರುವ ಕಹಿ ರುಚಿಯನ್ನು ಉಂಟುಮಾಡುತ್ತದೆ