ಕೋಲಾರ: ಕೋಲಾರದಲ್ಲಿ ಬಿಜೆಪಿ ಮುಖಂಡ ಸಿ.ಟಿ.ರವಿ ಮಾತನಾಡಿ, ಶಿವಮೊಗ್ಗದಲ್ಲಿ ನಡೆದ ಕೋಮುಗಲಭೆ ಪೂರ್ವ ನಿಯೋಜಿತ ಕೃತ್ಯ. ಇದು ಎಲ್ಲಾ ರೀತಿಯ ಅನುಮಾನಗಳನ್ನ ಹುಟ್ಟುಹಾಕಿವೆ ಎಂದರು. ಶಿವಮೊಗ್ಗ ಗಲಭೆಯ ನೇರ ಹೊಣೆ ರಾಜ್ಯ ಸರ್ಕಾರ ಹೊರಬೇಕು. ನ್ಯಾಯಾಂಗ ತನಿಖೆ ಮಾಡಬೇಕೆಂದು ಆಗ್ರಹಿಸುತ್ತೇನೆ. ಅಸಮರ್ಥ ಗೃಹ ಸಚಿವರು ಹಾಗೂ ಇದು ಅವರ ಸರ್ಕಾರದ ಅಸಮರ್ಥತೆಯನ್ನು ತೋರಿಸುತ್ತದೆ ಎಂದರು.
whatsappನಲ್ಲಿರುವ ಸ್ಕ್ರೀನ್ ಶೇರಿಂಗ್ ಫೀಚರ್ ಬಗ್ಗೆ ನಿಮಗೆ ಗೊತ್ತಿದೆಯಾ: ಇಲ್ಲಿದೆ ಮಾಹಿತಿ!
ಇನ್ನು ಹುಬ್ಬಳ್ಳಿಯಲ್ಲಿ ಮಸೀದಿ ಗಲಾಟೆ ಕೇಸ್ ವಾಪಸ್ ಪಡೆಯಲು ಡಿಸಿಎಂ ಡಿಕೆ ಶಿವಕುಮಾರ್ ಗೃಹ ಇಲಾಖೆಗೆ ಪತ್ರ ಬರೆದು ಮನವಿ ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಡಿಜೆ ಹಳ್ಳಿ ಕೆಜೆ ಹಳ್ಳಿ ಕೇಸ್ ವಾಪಸ್ ಪಡೆದರೂ ಆಶ್ವರ್ಯ ಇಲ್ಲ. ದಲಿತ ಶ್ರೀನಿವಾಸ್ ಮನೆಗೆ ಬೆಂಕಿ ಹಾಕಿದವರನ್ನ ಕೇಸ್ ನಿಂದ ಹೊರ ತೆಗೆದು ರಾಜ್ಯ ಪ್ರಶಸ್ತಿ ಕೊಟ್ಟರು ಆಶ್ವರ್ಯ ಇಲ್ಲ ಎಂದಿದ್ದಾರೆ.

