ಬೆಂಗಳೂರು:- ಮಾಜಿ ಸಚಿವ ರೇವಣ್ಣಗೆ ಶಾಕಿಂಗ್ ನ್ಯೂಸ್ ಎದುರಾಗಿದೆ. ಜಾಮೀನು ಸಿಕ್ಕರೂ ರೇವಣ್ಣ ಇಂದು ಜೈಲಿನಿಂದ ಮನೆಗೆ ಹೋಗುವಂತಿಲ್ಲ. ಅದರ ಬದಲಾಗಿ ಇಂದು ಒಂದಿನ ಜೈಲಲ್ಲೇ ಇದ್ದು, ನಾಳೆಯೇ ರೇವಣ್ಣಗೆ ಬಿಡುಗಡೆ ಭಾಗ್ಯ ಸಿಗಲಿದೆ.
Satish Jarakiholi: ನಮ್ಮ ಸರ್ಕಾರ ಬೀಳಲು ಸಾಧ್ಯವಿಲ್ಲ – ಸತೀಶ್ ಜಾರಕಿಹೊಳಿ
ಜಾಮೀನು ಮಂಜೂರು ಆದ್ರೂ ಎಚ್ಡಿ ರೇವಣ್ಣನಿಗೆ ಇಂದು ಜೈಲೇ ಗತಿಯಾಗಿದೆ. ಜಾಮೀನು ಮಂಜೂರು ಆದ್ರು ರೇವಣ್ಣ ಇಂದು ಜೈಲಲ್ಲೇ ಇರಬೇಕಾಗಿದೆ. ಐದು ಲಕ್ಷ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ನೀಡುವಂತೆ ಕೋರ್ಟ್ ಷರತ್ತು ವಿಧಿಸಿತ್ತು. ಆದರೆ ಇಂದು ಎಲ್ಲಾ ಷರತ್ತುನ್ನು ಪೂರ್ಣಗೊಳಿಸೋದು ಡೌಟ್ ಎನ್ನಲಾಗಿದೆ.
ಇನ್ನು ನ್ಯಾಯಾಲಯದ ಅವಧಿ ಕೂಡ ಮುಗಿದಿದ್ದು, ಇನ್ ಟೈಮ್ ಜೈಲಿಗೆ ನ್ಯಾಯಾಲಯದ ಆದೇಶ ಪ್ರತಿ ತಲುಪುವುದು ಅಸಾಧ್ಯವಾಗಿದೆ. ನ್ಯಾಯಾಲಯದ ಆದೇಶದ ಪ್ರತಿ ಜೈಲು ಅಧಿಕಾರಿಗಳ ಕೈ ಸೇರಲು ಸಂಜೆ 7 ಗಂಟೆ ಡೆಡ್ ಲೈನ್ ಆಗಿತ್ತು. ಆದರೆ ಇಂದು ನ್ಯಾಯಾಲಯದ ಆದೇಶದ ಪ್ರತಿ ಇನ್ ಟೈಮ್ ತಲುಪಿಸುವುದು ಅಸಾಧ್ಯ.
ಈ ಎಲ್ಲಾ ಕಾರಣಕ್ಕೆ ನಾಳೆಯೇ ಕೋರ್ಟ್ ಷರತ್ತು ಪೂರೈಸಿ, ರೇವಣ್ಣ ಅವರನ್ನು ಜೈಲಿಂದ ರಿ್ಲೀಸ್ ಮಾಡಿಸಬೇಕಿದೆ. ಹೀಗಾಗಿ ನಾಳೆ ಸಂಜೆ ವೇಳೆಗೆ ರೇವಣ್ಣ ಜೈಲಿಂದ ಹೊರಬರಲಿದ್ದಾರೆ. ಅಲ್ಲಿವರೆಗೆ ಇಂದು ಒಂದು ರಾತ್ರಿ ರೇವಣ್ಣ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲೇ ಇರಬೇಕಾಗಿದೆ.
ಇಂದು ಸುದೀರ್ಘ ವಾದ ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ನ್ಯಾಯಾಲಯ ಸಂಜೆ 6.45ರ ಸುಮಾರಿಗೆ ರೇವಣ್ಣ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿತ್ತು. ನ್ಯಾಯಮೂರ್ತಿ ಸಂತೋಷ್ ಗಜಾನನ್ ಭಟ್ ಅವರು ಆದೇಶ ನೀಡಿದ್ದಾರೆ. ಇತ್ತ ಎಚ್ಡಿ ರೇವಣ್ಣಗೆ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡುತ್ತಿದ್ದಂತೆ, ಅತ್ತ ಅವರ ಸ್ವಕ್ಷೇತ್ರ ಹೊಳೆನರಸೀಪುರದಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಗಾಂಧಿ ವೃತ್ತದಲ್ಲಿ ರೇವಣ್ಣ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ರೇವಣ್ಣ ಪರ ಜೈಕಾರ ಕೂಗಿದ್ರು