ಶನಿವಾರದ ದಿನವನ್ನು ಹಿಂದೂ ಧರ್ಮದ ದೇವರಾದ ಸೂರ್ಯನ ಮಗನಾದ ಶನಿ ದೇವರ ಆರಾಧನೆಯ ದಿನವೆಂದು ಪರಿಗಣಿಸಲಾಗಿದೆ. ಶನಿದೇವನನ್ನು ಮೆಚ್ಚಿಸಲು ಶನಿವಾರದಂದು ಕೆಂಪು ಬಣ್ಣದ ಹೂವನ್ನು ಆತನಿಗೆ ಅರ್ಪಿಸಿದಂತೆ ಅನೇಕ ಸಣ್ಣ ಕೆಲಸಗಳನ್ನು ಕೂಡ ಮಾಡಬಹುದು. ಈ ದಿನದಂದು ಕೈಗೊಳ್ಳುವ ಕೆಲವು ಸರಳ ಕ್ರಮಗಳು ನಿಮಗೆ ಅಪೇಕ್ಷಿತ ಸಂಪತ್ತು,
ಸಂತೋಷ – ಸಮೃದ್ಧಿ, ಉದ್ಯೋಗವನ್ನು ಕರುಣಿಸಿ, ಶನಿ ದೋಷದಿಂದ ಮುಕ್ತಿ ನೀಡಿ ನಿಮ್ಮ ಅದೃಷ್ಟವನ್ನು ಬೆಳಗಿಸಬಹುದು, ಜೊತೆಗೆ ನೀವು ಜೀವನದಲ್ಲಿ ಉತ್ತಮ ಮತ್ತು ಮಂಗಳಕರ ಫಲಿತಾಂಶಗಳನ್ನು ಪಡೆಯಲು ಸಹಕರಿಸಬಹುದು. ಶನಿವಾರದಂದು ಮಾಡಬಹುದಾದ ಅತ್ಯಂತ ಸರಳ ಪರಿಹಾರಗಳು ಹೀಗಿವೆ ನೋಡಿ..
ಶನಿವಾರದ ಪರಿಹಾರಗಳು:
ಈ ವಸ್ತುಗಳನ್ನು ದಾನ ಮಾಡಿ: ಶನಿವಾರದಂದು ದಾನ ಮಾಡುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಶನಿದೇವನ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ. ಈ ದಿನ, ಕರಿ ಎಳ್ಳು, ಕರಿ ಉದ್ದಿನ ಬೇಳೆ, ಕರಿ ಎಳ್ಳು ಎಣ್ಣೆ, ಕರಿ ಬೆಲ್ಲ, ಕಪ್ಪು ಬಟ್ಟೆ ಅಥವಾ ಕಬ್ಬಿಣದಂತಹ ವಸ್ತುಗಳನ್ನು ಅಗತ್ಯವಿರುವವರಿಗೆ ದಾನ ಮಾಡುವುದು ತುಂಬಾ ಮಂಗಳಕರ ಮತ್ತು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.
ಅರಳಿ ಮರದ ಪೂಜೆ: ಶನಿವಾರದಂದು ಉಪವಾಸ ಮಾಡುವುದು ಮತ್ತು ಅರಳಿ ಮರವನ್ನು ಪೂಜಿಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಶನಿವಾರ ಬೆಳಗ್ಗೆ ಗಂಗಾಜಲದಲ್ಲಿ ಕರಿ ಎಳ್ಳು ಮಿಶ್ರಿತ ನೀರನ್ನು ಅರ್ಪಿಸಿ, ಎಳ್ಳೆಣ್ಣೆ ದೀಪ ಹಚ್ಚಬೇಕು. ಇದರ ನಂತರ, ಓಂ ಶಂ ಶನೈಶ್ಚರಾಯ ನಮಃ ಎಂಬ ಮಂತ್ರವನ್ನು ಪಠಿಸಿ. ಹೀಗೆ ಮಾಡುವುದರಿಂದ ಶನಿದೇವನು ಸಂತುಷ್ಟನಾಗುತ್ತಾನೆ ಎಂಬ ನಂಬಿಕೆ ಇದೆ.
ಕಪ್ಪು ನಾಯಿಗೆ ಆಹಾರ ನೀಡುವುದು: ಕಪ್ಪು ನಾಯಿಯನ್ನು ಶನಿದೇವನ ವಾಹನವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಕಪ್ಪು ನಾಯಿಗೆ ಶನಿವಾರ ಆಹಾರವನ್ನು ನೀಡಬೇಕು. ಇದು ಶನಿದೇವನನ್ನು ಮೆಚ್ಚಿಸುತ್ತದೆ ಮತ್ತು ವ್ಯಕ್ತಿಯನ್ನು ಸಾಲದಿಂದ ಮುಕ್ತಗೊಳಿಸುತ್ತದೆ.
ಮಣ್ಣಿನ ಮಡಕೆ ಮತ್ತು ಜೇನುತುಪ್ಪ: ವ್ಯಾಪಾರದಲ್ಲಿ ಹಿನ್ನಡೆಯಿದ್ದು, ನಿಮ್ಮ ಕೆಲಸವನ್ನು ಮುಂದುವರಿಸಲು ನಿಮಗೆ ಸಾಧ್ಯವಾಗುತ್ತಿಲ್ಲ ಎಂದು ತಿಳುದಬಂದರೆ ಇಂದು ಮಣ್ಣಿನ ಮಡಕೆಯನ್ನು ತೆಗೆದುಕೊಂಡು, ಅದರಲ್ಲಿ ಜೇನುತುಪ್ಪವನ್ನು ತುಂಬಿಸಿ, ಅದರ ಮೇಲೆ ಮುಚ್ಚಳವನ್ನು ಹಾಕಿ ಮತ್ತು ಅದನ್ನು ಮನೆಯ ವಾಯವ್ಯ ಮೂಲೆಯಲ್ಲಿ ಇಡೀ ದಿನ ಇಡಿ. ಮರುದಿನ, ನಿಮ್ಮ ವ್ಯಾಪಾರದ ಬೆಳವಣಿಗೆಗಾಗಿ ಮಾನಸಿಕವಾಗಿ ಪ್ರಾರ್ಥಿಸುತ್ತಾ, ಜೇನು ತುಂಬಿದ ಮಣ್ಣಿನ ಮಡಕೆಯನ್ನು ಏಕಾಂತ ಸ್ಥಳದಲ್ಲಿ ಇಟ್ಟುಬಿಡಿ.
ಇದನ್ನು ಪೂಜಿಸಿ
ಶನಿವಾರದ ದಿನದಂದು ಮರೆಯದೇ ಮನೆಯಲ್ಲಿ ಶನಿ ಯಂತ್ರವನ್ನು ಪೂಜಿಸಬೇಕು. ಇದರಿಂದ ನೀವು ಭಗವಾನ್ ಶನಿಯ ಅನುಗ್ರಹವನ್ನು ಪಡೆದುಕೊಳ್ಳಬಹುದು ಹಾಗೂ ಶನಿ ದೋಷದಿಂದ ಮುಕ್ತಿಯನ್ನು ಕಾಣಬಹುದು.
ಛಾಯಾ ದಾನ ಮಾಡಿ
ಶನಿವಾರದಂದು ಒಂದು ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಮುಖವನ್ನು ನೋಡಿ ಮತ್ತು ಎಣ್ಣೆಯೊಂದಿಗೆ ಆ ಪಾತ್ರೆಯನ್ನು ಕೂಡ ದಾನ ಮಾಡಬೇಕು.