ಬೆಂಗಳೂರು:- ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಭ್ರೂಣ ಲಿಂಗ ಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಆರೋಪಿ ವೈದ್ಯ ಹಾಗೂ ಅವರ ಸಹಾಯಕರನ್ನು ಬಂಧಿಸಿದ್ದಾರೆ.
ತುಳಸಿರಾಮ್ (41), ಮೈಸೂರು ಉದಯಗಿರಿಯಲ್ಲಿರುವ ಮಾತಾ ಆಸ್ಪತ್ರೆ ವ್ಯವಸ್ಥಾಪಕರಾದ ಸಿ.ಎಂ. ಮೀನಾ (38) ಹಾಗೂ ಆಸ್ಪತ್ರೆಯ ಸ್ವಾಗತಗಾರ್ತಿ ರಿಜ್ಮಾ ಖಾನಂ (38) ಬಂಧಿತರು.
ಅ. 15ರಂದು ಬೆಂಗಳೂರಿನಿಂದ ಮಂಡ್ಯಕ್ಕೆ ಗರ್ಭಿಣಿಯೊಬ್ಬರನ್ನು ಭ್ರೂಣ ಲಿಂಗ ಪತ್ತೆಗಾಗಿ ಕಾರಿನಲ್ಲಿ ಕರೆದೊಯ್ಯಲಾಗುತ್ತಿತ್ತು. ಕಾರು ನೋಡಿ ಅನುಮಾನಗೊಂಡಿದ್ದ ಪೊಲೀಸರು, ಬೆನ್ನಟ್ಟಿ ಕಾರು ನಿಲ್ಲಿಸಿದ್ದರು. ಕಾರಿನಲ್ಲಿದ್ದವರನ್ನು ವಿಚಾರಣೆ ನಡೆಸಿದಾಗ, ಭ್ರೂಣ ಲಿಂಗ ಪತ್ತೆ ಜಾಲದ ಮಾಹಿತಿ ಲಭ್ಯವಾಗಿತ್ತು’ ಎಂದು ಪೊಲೀಸರು ಹೇಳಿದರು.
‘ವೈದ್ಯನ ಸಂಬಂಧಿಯೂ ಆಗಿದ್ದ ವೀರೇಶ್, ನವೀನ್ಕುಮಾರ್, ಶಿವಲಿಂಗೇಗೌಡ ಹಾಗೂ ನಯನ್ಕುಮಾರ್ನನ್ನು ಆರಂಭದಲ್ಲಿ ಬಂಧಿಸಲಾಗಿತ್ತು. ಅವರು ನೀಡಿದ್ದ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಿ ಇದೀಗ ಮತ್ತೆ ಮೂವರನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.
ಬಂಧಿತ ವೈದ್ಯ ತುಳಸಿರಾಮ್ ಹಾಗೂ ಇತರರು, ಮೂರು ವರ್ಷಗಳಿಂದ ಭ್ರೂಣ ಲಿಂಗ ಪತ್ತೆ ಮತ್ತು ಗರ್ಭಪಾತ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು