ಬ್ಯಾಂಕಾಕ್: ಆನೆಗಳು ಅಸಾಧಾರಣವಾದ ಬುದ್ಧಿವಂತ ಪ್ರಾಣಿಗಳಾಗಿದ್ದು, ಅವುಗಳಿಗೂ ಭಾವನೆಗಳಿವೆ ಎಂದು ಈ ವೀಡಿಯೋ ನೋಡಿದರೆ ಅರ್ಥವಾಗುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ. ಟ್ವಿಟ್ಟರ್ ನಲ್ಲಿ ಬ್ಯುಟೆಂಗೆಬೀಡೆನ್ ಅವರು ವೀಡಿಯೋವನ್ನು ಹಂಚಿಕೊಂಡಿದ್ದು, ಆನೆಗಳು 14 ತಿಂಗಳ ನಂತರ ತಮ್ಮ ಪಾಲಕರೊಂದಿಗೆ ಮತ್ತೆ ಒಂದಾಗುತ್ತಿವೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ಪ್ರಸ್ತುತ ಈ ಭಾವನಾತ್ಮಕ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಘಟನೆಯು ಥೈಲ್ಯಾಂಡ್‍ನ ಎಲಿಫೆಂಟ್ ನೇಚರ್ ಪಾರ್ಕ್‍ನಲ್ಲಿ ನಡೆದಿದ್ದು, ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ವಿಶೇಷ ಬಾಂಧವ್ಯವನ್ನು ಬಿಂಬಿಸುವ ಈ ಹೃದಯಸ್ಪರ್ಶಿ ವೀಡಿಯೋ ನೋಡಿದ ನೆಟ್ಟಿಗರು ಭಾವನಾತ್ಮಕವಾಗಿ ಕಮೆಂಟ್ ಮಾಡುತ್ತಿದ್ದಾರೆ.ವೀಡಿಯೋದಲ್ಲಿ, ಥಾಯ್ಲೆಂಡ್‍ನ ಅಭಯಾರಣ್ಯದಲ್ಲಿ ಆನೆಗಳ ಹಿಂಡು 14 ತಿಂಗಳ ನಂತರ ಹಿಂತಿರುಗಿದ್ದು,

https://twitter.com/buitengebieden_/status/1474125263554424837?ref_src=twsrc%5Etfw%7Ctwcamp%5Etweetembed%7Ctwterm%5E1474125263554424837%7Ctwgr%5E%7Ctwcon%5Es1_&ref_url=https%3A%2F%2Fpublictv.in%2Felephants-reunite-with-caretaker-after-14-months-video-makes-people-emotional%2F
ಆನೆಗಳನ್ನು ಪಾಲಕ ಡೆರಕ್ ಥಾಂಪ್ಸನ್ ಸಂತೋಷದಿಂದ ಸ್ವಾಗತಿಸುತ್ತಾನೆ. ಆಗ ಎಲ್ಲ ಆನೆಗಳು ಅವನ ಸುತ್ತ ಬಂದು ನಿಂತುಕೊಳ್ಳುತ್ತವೆ. ಆಗ ಥಾಂಪ್ಸನ್ ಅವುಗಳನ್ನು ಅಪ್ಪಿಕೊಳ್ಳುತ್ತಾನೆ. ಆನೆಗಳು ಥಾಂಪ್ಸನ್ ನನ್ನು ತಮ್ಮ ಸೊಂಡಿಲಿನಿಂದ ಅಪ್ಪಿಕೊಂಡು ಅವುಗಳ ಪ್ರೀತಿಯನ್ನು ವ್ಯಕ್ತಪಡಿಸುತ್ತವೆ. ಈ ವೀಡಿಯೋ ನೋಡಿದರೆ ಮನುಷ್ಯ ಮತ್ತೆ ಪ್ರಾಣಿಗಳ ನಡುವೆ ಯಾವ ರೀತಿಯ ಬಾಂಧವ್ಯವಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತೆ.
