ಹುಬ್ಬಳ್ಳಿ : ದೇಶದ ಐದು ರಾಜ್ಯಗಳ ಚುನವಣಾ ಫಲಿತಾಂಶ ಲೋಕಸಭಾ ಚುನಾವಣೆ ಮುನ್ನಡೆ ಆಗಲಿದೆ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಭಾರತೀಯ ರಾಷ್ಟ್ರೀಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅಭಿಪ್ರಾಯಪಟ್ಟರು.ಭಾನುವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ಪ್ರಧಾನಿ ನರೇಂದ್ರ ಮೋದಿ, ಪ್ರಹ್ಲಾದ್ ಜೋಶಿ ಪರ ಘೋಷಣೆ ಸೆಮಿಫೈನಲ್ಸ್ ಮ್ಯಾಚ್ ನಲ್ಲಿ ನಾವು ಗೆದ್ದಿದ್ದೇವೆ. ಕಾಂಗ್ರೆಸ್ ಬಿಟ್ಟಿ ಭಾಗ್ಯಗಳ ಆಸೆಯನ್ನು ಮೀರಿ ಜನ ಬಿಜೆಪಿ ಕೈ ಹಿಡಿದಿದ್ದಾರೆ ಇದು ಲೋಕಸಭಾ ಚುನಾವಣಾ ಮುನ್ನುಡಿ ಆಗಲಿದೆ. ದೇಶದ ಪ್ರಧಾನಿ ಮೋದಿ ನಾಯಕತ್ವವನ್ನು ದೇಶದ ಜನತೆ ಮತ್ತೊಮ್ಮೆ ಒಪ್ಪಿದೆಆದರೆ ಕಾಂಗ್ರೆಸ್ ಇದ್ದ ಎರಡು ದೊಡ್ಡ ರಾಜ್ಯಗಳನ್ನು ಕಳೆದುಕೊಂಡಿದೆ ಎಂದ ಅವರು,
ತೆಲಂಗಾಣದಲ್ಲಿಯೂ ಸಹ ಒಂದು ಸ್ಥಾನದಿಂದ ಹತ್ತು ಸ್ಥಾನಕ್ಕೆ ಬಿಜೆಪಿ ಬಂದಿದೆ ಇದೊಂದು ಒಳ್ಳೆಯ ಬೆಳವಣಿಗೆ ಎಂದ ಅವರು
ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ತೆಲಂಗಾಣದಲ್ಲಿ ಭಾರತೀಯ ಜನತಾ ಪಕ್ಷದ ಗೆಲ್ಲುವ ಭರವಸೆಯಿದೆ ಕರ್ನಾಟಕದ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ತೆಲಂಗಾಣದಲ್ಲಿ ಪರಿಣಾಮ ಬೀರಿವೆ ಎಂದರು.