ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆ ನಡೆದಿದ್ದು, ಮರಾಠಿಗರಿಗೆ ಮೇಯರ್ ಮತ್ತು ಕನ್ನಡಿಗರಿಗೆ ಉಪ ಮೇಯರ್ ಪಟ್ಟ ಸಿಕ್ಕಿದೆ. ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟಣ್ಣವರ ಫಲಿತಾಂಶ ಘೋಷಣೆ ಮಾಡಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಆಗಿ ಮಂಗೇಶ್ ಪವಾರ್, ಉಪ ಮೇಯರ್ ಆಗಿ ವಾಣಿ ವಿಲಾಸ್ ಜೋಶಿ ಆಯ್ಕೆಯಾಗಿದ್ದಾರೆ. ಸದಸ್ಯತ್ವ ರದ್ದುಗೊಳಿಸಿದ್ದ ಸದಸ್ಯನನ್ನೆ ಮೇಯರ್ ಆಗಿ ಮಾಡಿರುವ ಅಭಯ್ ಪಾಟೀಲ್ ಕಾಂಗ್ರೆಸ್ ವಿರುದ್ಧ ಗೆದ್ದು ಬೀಗಿದ್ದಾರೆ.
ಎರಡು ದಿನಗಳ ಹಿಂದೆಯೇ ಬೆಂಗಳೂರು ಹೈಕೋರ್ಟ್ ಬಿಜೆಪಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದಿಗೆ ತಡೆ ನೀಡಿತ್ತು. ಜಾತಿ ಲೆಕ್ಕಾಚಾರದಲ್ಲಿ ಮರಾಠಾ, ಬ್ರಾಹ್ಮಣ ಸಮುದಾಯಕ್ಕೆ ಮೇಯರ್ ಉಪಮೇಯರ್ ಪಟ್ಟ ಒಲಿದಿದೆ. ಮೇಯರ್ ಸ್ಥಾನ ಸಾಮಾನ್ಯ ಪುರುಷ, ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 58 ಸದಸ್ಯರು, ಚುನಾಯಿತ ಪ್ರತಿನಿಧಿಗಳು ಸೇರಿ 65 ಜನ ಮತದಾನದ ಹಕ್ಕು ಇದ್ದು, ಚುನಾಯಿತರಲ್ಲಿ 60 ಜನರು ಮಾತ್ರ ಭಾಗಿ, 5 ಮತದಾರರು ಗೈರಾಗಿದ್ದರು. ಇದರಲ್ಲಿ35 ಬಿಜೆಪಿ ಸದಸ್ಯರ ಜೊತೆಗೆ ಇಬ್ಬರು ಪಕ್ಷೇತರ ಸೇರಿ 37 ಬಲವಿತ್ತು. ಅತ್ತ ಕಾಂಗ್ರೆಸ್ 11 ಪಕ್ಷೇತರರ ಬೆಂಬಲ ಸೇರಿ 21 ಸದಸ್ಯ ಬಲಾಬಲವಿತ್ತು. ಬಿಜೆಪಿ ಪರ ಸಂಸದ ಜಗದೀಶ್ ಶೆಟ್ಟರ್, ಶಾಸಕ ಅಭಯ ಪಾಟೀಲ್, ಎಂಎಲಸಿ ಸಾಬಣ್ಣ ತಳವಾರಗೆ ಮತದಾನ ಹಕ್ಕು ಇದ್ದು, ಅದೇ ಕಾಂಗ್ರೆಸ್ ಪರ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಆಶೀಫ್ ಸೇಠ್, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಗೆ ಮತದಾನದ ಹಕ್ಕಿದ್ದರೂ ಗೈರಾಗಿದ್ದರು.