ಮೈಸೂರು : ಪಿಎಸ್ಐ ಪುತ್ರನ ಪುಂಡಾಟದಿಂದ ಅಮಾಯಕ ವೃದ್ದ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರದ ಬಳಿ ಹುಳಿಮಾವು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಪಿಎಸ್ಐ ಪುತ್ರನ ವೀಲಿಂಗ್ ಹುಚ್ಚಾಟಕ್ಕೆ ವೃದ್ದ ಗುರುಸ್ವಾಮಿ ಬಲಿಯಾಗಿದ್ದು, ನಾವು ಯಾವುದೇ ಕಾರಣಕ್ಕೂ ಶವ ತೆಗೆದುಕೊಂಡು ಹೋಗಲ್ಲ.
ಗಣೇಶನ ಪ್ರಿಯವಾದ ಸಿಹಿಗಡುಬು ಮಾಡೋದು ಹೇಗಂತೀರಾ? ಇಲ್ಲಿದೆ ವಿಧಾನ!
ಪಿಎಸ್ಐ ಯಾಸ್ಮಿನ್ ತಾಜ್ ಅವರನ್ನೂ ಅಮಾನತ್ತು ಮಾಡಿ. ಯಾಸ್ಮಿತ್ ತಾಜ್ ಅವರನ್ನೂ ಬಂಧಿಸಬೇಕು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದು, ಶವ ಕೊಂಡೊಯ್ಯಲು ನಿರಾಕರಿಸಿದ್ದಾರೆ. ಇದರಿಂದ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದಾರೆ.
