ಮಕ್ಕಳಿಗೆ ಬಾಲ್ಯದಿಂದಲೂ ದೃಷ್ಟಿ ಆರೋಗ್ಯವನ್ನು ಪೋಷಿಸುವುದು ಅವಶ್ಯವಾಗಿದೆ. ಏಕೆಂದರೆ ಇವು ಅವರ ಒಟ್ಟಾರೆ ಅಭಿವೃದ್ಧಿ ಮತ್ತು ಯೋಗಕ್ಷೇಮಕ್ಕೆ ನಿರ್ಣಾಯಕವಾಗಿದೆ. ಅವರು ಸೇವಿಸುವ ಆಹಾರವು ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳುವುದರ ಮೇಲೆ ಪರಿಣಾಮ ಬೀರುತ್ತದೆ. ಅದು ಮಕ್ಕಳು ಬೆಳೆದಂತೆ ಎದುರಾಗಬಹುದಾದ ದೃಷ್ಟಿ ಸಮಸ್ಯೆಗಳನ್ನು ತಡೆಯುತ್ತದೆ.
ವಿಟಮಿನ್ ಎ ಕಣ್ಣಿನ ಬೆಳವಣಿಗೆಯನ್ನು ಬೆಂಬಲಿಸುತ್ತದೆ. ಒಮೆಗಾ -3 ಕೊಬ್ಬಿನಾಮ್ಲಗಳು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತವೆ. ಹಾಗೆಯೇ ಉತ್ತಮ ದೃಷ್ಟಿ ಆರೋಗ್ಯಕ್ಕಾಗಿ ವಿವಿಧ ವರ್ಣರಂಜಿತ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಲು ಮಕ್ಕಳನ್ನು ಪ್ರೋತ್ಸಾಹಿಸುವುದು ಅತ್ಯಗತ್ಯ. ಹೀಗೆ ಕಣ್ಣುಗಳನ್ನು ಚುರುಕುಗೊಳಿಸಲು ಮತ್ತು ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ನೀವು ಸೇವಿಸಬೇಕಾದ ಕೆಲವು ಆಹಾರಗಳನ್ನು ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಆಹಾರವು ವಯಸ್ಸಿಗೆ ಸಂಬಂಧಿಸಿದ ಪರಿಸ್ಥಿತಿಗಳಿಂದ ದೃಷ್ಟಿಯನ್ನು ರಕ್ಷಿಸುತ್ತದೆ. ವಿಟಮಿನ್ ಸಿ, ಇ ಮತ್ತು ಬೀಟಾ ಕ್ಯಾರೋಟಿನ್ ನಂತಹ ಉತ್ಕರ್ಷಣ ನಿರೋಧಕಗಳು ಸಾಮಾನ್ಯವಾಗಿ ಕಿತ್ತಳೆ, ಬೆರ್ರಿಗಳು, ಕ್ಯಾರೆಟ್, ಪಾಲಕ ಮತ್ತು ಬ್ರೊಕೊಲಿ ಮುಂತಾದ ತರಕಾರಿಗಳಲ್ಲಿ ಕಂಡುಬರುತ್ತವೆ.
ಬಾಲ್ಯದಲ್ಲಿ ಕಣ್ಣಿನ ಬೆಳವಣಿಗೆ ತ್ವರಿತವಾಗಿರುತ್ತದೆ. ಆರೋಗ್ಯಕರ ದೃಷ್ಟಿಯನ್ನು ಕಾಪಾಡಿಕೊಳ್ಳಲು ವಿಟಮಿನ್ ಎ ಅತ್ಯಗತ್ಯ. ಇದು ರೆಟಿನಾ ಮತ್ತು ಇತರ ಕಣ್ಣಿನ ಅಂಗಾಂಶಗಳ ಬೆಳವಣಿಗೆಯನ್ನು ಬೆಂಬಲಿಸುತ್ತದೆ.
ಇದಕ್ಕಾಗಿ ಡೈರಿ ಉತ್ಪನ್ನಗಳು, ಮೊಟ್ಟೆಗಳು ಮತ್ತು ಹಸಿರು ಎಲೆಗಳ ತರಕಾರಿಗಳಂತಹ ಆಹಾರ ಮೂಲಗಳು ವಿಟಮಿನ್ ಎ ಯಲ್ಲಿ ಸಮೃದ್ಧವಾಗಿವೆ. ಹಾಗಾಗಿ ಈ ಆಹಾರಗಳನ್ನು ನಿಮ್ಮ ಊಟದಲ್ಲಿರುವಂತೆ ನೋಡಿಕೊಳ್ಳಿ.
ಪೌಷ್ಟಿಕತಜ್ಞರು ಹಾಗೂ ನ್ಯೂಟ್ರಸಿ ಲೈಫ್ಸ್ಟೈಲ್, ಸಂಸ್ಥಾಪಕರೂ ಆದ ಡಾ. ರೋಹಿಣಿ ಪಾಟೀಲ್ ಅವರು, “ಒಮೆಗಾ 3 ಕೊಬ್ಬಿನಾಮ್ಲಗಳು ರೆಟಿನಾದಲ್ಲಿನ ಜೀವಕೋಶ ಪೊರೆಯ ರಚನಾತ್ಮಕ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮೂಲಕ ಕಣ್ಣಿನ ದೃಷ್ಟಿಯನ್ನು ಬೆಂಬಲಿಸುತ್ತವೆ.
ಇದು ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುವ ಮೂಲಕ ಉರಿಯೂತದ ವಿರುದ್ಧವೂ ರಕ್ಷಿಣೆ ನೀಡುತ್ತವೆ. ಕೊಬ್ಬಿನ ಮೀನು (ಸಾಲ್ಮನ್), ವಾಲ್ನಟ್ಸ್ ಮತ್ತು ಅಗಸೆಬೀಜಗಳು ಒಮೆಗಾ-3 ನಲ್ಲಿ ಇವು ಹೇರಳವಾಗಿವೆ.
ಇಂದಿನ ಮಕ್ಕಳು ಟಿವಿ, ಮೊಬೈಲ್ಗಳಲ್ಲಿ ಸಮಯ ಕಳೆಯುವುದ ಹೆಚ್ಚು. ಈ ಸ್ಕ್ರೀನ್ ಟೈಂ ಕಣ್ಣುಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಹಾಗಾಗಿ ಅವರಿಗೆ ವಿಟಮಿನ್ ಇ-ಭರಿತ ಆಹಾರಗಳನ್ನು ನೀಡಿ.
ಮುಖ್ಯವಾಗಿ ಬೀಜಗಳು ಕಣ್ಣುಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.