ಸಾರ್ವಜನಿಕರೇ ಗಮನಿಸಿ: ಇಂದಿನಿಂದ 3 ದಿನ ಇ-ಸ್ವತ್ತು ತಂತ್ರಾಂಶ ಸ್ಥಗಿತ..! ಯಾಕೆ ಗೊತ್ತಾ..?

ಬೆಂಗಳೂರು: ಯಾವುದೇ ಜಾಗವನ್ನು ಖರೀದಿಸುವ ಮುನ್ನ ಅದರ ಮಾಲೀಕತ್ವದ ಕುರಿತು ಸ್ಪಷ್ಟ ಮಾಹಿತಿ ಸಿಗಲಿ ಎನ್ನುವ ಉದ್ದೇಶದಿಂದ ಸರ್ಕಾರ ಇ- ಸ್ವತ್ತು ತಂತ್ರಾಂಶವನ್ನು ರೂಪಿಸಿದೆ. ಇ-ಸ್ವತ್ತಿ‌ನಲ್ಲಿ ನೋಂದಣಿಯಾದಲ್ಲಿ ಮಾತ್ರ ಆ ಜಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದಾಗಿದೆ. ಆದರೆ ಇ-ಸ್ವತ್ತು ತಂತ್ರಾಂಶದ ಹೊಸ ಅವತರಣಿಕೆಯನ್ನು ಪರಿಚಯಿಸುತ್ತಿರುವುದರಿಂದ ಜುಲೈ 27ರಿಂದ ಜುಲೈ 29ರವರೆಗೆ ಇ-ಸ್ವತ್ತು ತಂತ್ರಾಂಶ ಕಾರ್ಯನಿರ್ವಹಿಸುವುದಿಲ್ಲ. ಹಾಗಾಗಿ, ಸಾರ್ವಜನಿಕರು ಸಹಕಾರ ನೀಡುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ. … Continue reading ಸಾರ್ವಜನಿಕರೇ ಗಮನಿಸಿ: ಇಂದಿನಿಂದ 3 ದಿನ ಇ-ಸ್ವತ್ತು ತಂತ್ರಾಂಶ ಸ್ಥಗಿತ..! ಯಾಕೆ ಗೊತ್ತಾ..?