ಬೆಂಗಳೂರು:- ಇಂದು (ಏಪ್ರಿಲ್ 17) ದ್ವಾರಕೀಶ್ ಅಂತ್ಯಕ್ರಿಯೆ ನಡೆಯಲಿದೆ. ಎಲ್ಲಿ, ಯಾವಾಗ ಅಂತ್ಯಕ್ರಿಯೆ ನಡೆಯಲಿದೆ, ಸಾರ್ವಜನಿಕರು ಎಷ್ಟು ಗಂಟೆಯವರೆಗೆ ಬಂದು ಅಂತಿಮ ದರ್ಶನಕ್ಕೆ ಪಡೆಯಬಹುದು ಎನ್ನುವ ಬಗ್ಗೆ ವಿವರ ಇಲ್ಲಿದೆ
ಬೆಳಿಗ್ಗೆ 7:30 ನಂತರ ಬೆಂಗಳೂರಿನ ಟೌನ್ಹಾಲ್ ಬಳಿ ಇರುವ ರವೀಂದ್ರ ಕಲಾಕ್ಷೇತ್ರಕ್ಕೆ ದ್ವಾರಕೀಶ್ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತದೆ. 11:30ರವೆರೆಗೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದರ್ಶನದ ಬಳಿಕ ಬೆಂಗಳೂರಿನ ಚಾಮರಾಜಪೇಟೆ ಟಿಆರ್ಮಿಲ್ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.
ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು ಆರೋಪ, ಖಾಸಗಿ ಆಸ್ಪತ್ರೆ ವಿರುದ್ಧ ದೂರು!
ಗೌರವ ಸಲ್ಲಿಕೆ
ದ್ವಾರಕೀಶ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಹೀಗಾಗಿ, ಅವರಿಗೆ ಗೌರವ ಸಲ್ಲಿಕೆ ಮಾಡಲಾಗುತ್ತಿದೆ. ಇಂದು ಬೆಳಗ್ಗೆ 10.30ರ ಶೋ ಬಂದ್ ಮಾಡಲು ಪ್ರದರ್ಶಕರ ವಲಯದಿಂದ ಕರೆ ನೀಡಲಾಗಿದೆ. ಪ್ರದರ್ಶಕರ ವಲಯದ ಕರೆಗೆ ಚಿತ್ರೋದ್ಯಮ ಸಾಥ್ ಕೊಟ್ಟಿದೆ. ಮದ್ಯಾಹ್ನ 1 ಘಂಟೆ ನಂತರ ಚಿತ್ರಮಂದಿರಗಳಲ್ಲಿ ಶೋ ಆರಂಭ ಆಗಲಿವೆ. ಸಿಂಗಲ್ ಸ್ಕ್ರೀನ್, ಮಲ್ಟಿಪ್ಲೆಕ್ಸ್ ಎಲ್ಲವೂ ಒಂದು ಶೋ ಬಂದ್ ಮಾಡಲಿವೆ.