ನಾಯಕನಾಗಿ ಸೈ ಎನಿಸಿಕೊಂಡಿದ್ದ ನಟ ದುನಿಯಾ ವಿಜಯ್ ಭೀಮ ಸಿನಿಮಾದ ಮೂಲಕ ಡೈರೆಕ್ಟರ್ ಆಗಿಯೂ ಸೈ ಎನಿಸಿಕೊಂಡಿದ್ದಾರೆ. ಇದೀಗ ಮಗಳಿಗಾಗಿ ವಿಜಯ್ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.
ಸಲಗ ವಿಜಯ್ ಭೀಮ ಚಿತ್ರದ ನಂತರ ಮತ್ತೆ ನಿರ್ದೇಶನಕ್ಕೆ ಇಳಿದ ದುನಿಯಾ ವಿಜಯ್ ಆ್ಯಕ್ಷನ್ ಕಟ್ ಹೇಳೋದಕ್ಕೆ ರೆಡಿಯಾಗಿದ್ದಾರೆ. ಈ ಭಾರಿ ಮಗಳಿಗಾಗಿ ನಿರ್ದೇಶಕರ ಕ್ಯಾಪ್ ಧರಿಸಿದ್ದಾರೆ.
ವಿಜಯ್ ನಿರ್ದೇಶನದ ಮೂರನೇ ಚಿತ್ರಕ್ಕೆ ಅಣ್ಣಾವ್ರ ಮೊಮ್ಮಗ ವಿನಯ್ ನಾಯಕನಾಗಿದ್ದಾರೆ. ವಿನಯ್ ಅಭಿನಯದ ಸಿಟಿ ಲೈಟ್ಸ್ ಚಿತ್ರಕ್ಕೆ ದುನಿಯಾ ವಿಜಯ್ ಪುತ್ರಿ ಮೋನಿಷಾ ನಾಯಕಿಯಾಗಿದ್ದು, ಸಿಟಿಲೈಟ್ಸ್ ಚಿತ್ರಕ್ಕೆ ಇಂದು ಸಿಂಪಲ್ ಆಗಿ ಮುಹೂರ್ತ ನೆರವೇರಿದೆ.
ಶಕ್ತಿ ದೇವತೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಸಿಟಿ ಲೈಟ್ಸ್ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ಅಣ್ಣಾವ್ರ ಚಾಲಕ ಹನುಮಂತು ಸಿಟಿ ಲೈಟ್ಸ್ ಚಿತ್ರದ ಮೂಹೂರ್ತಕ್ಕೆ ಕ್ಯಾಮಾರ ಚಾಲನೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಮಗನ ಸಿಟಿ ಲೈಟ್ಸ್ ಚಿತ್ರಕ್ಕೆ ಕ್ಲಾಪ್ ಮಾಡಿದ ರಾಘಣ್ಣ ದಂಪತಿ ಶುಭ ಹಾರೈಸಿದ್ದಾರೆ. ಸಿಟಿ ಲೈಟ್ಸ್ ಸುದ್ದಿ ಗೋಷ್ಟಿಯಲ್ಲಿ ರಾಘಣ್ಣ ದಂಪತಿ, ನವೀಶ್ ಶಂಕರ್, ಲೂಸ್ ಮಾದ ಯೋಗಿ, ನೀನಾಸಂ ಸತೀಶ್, ಯುವ, ನಿರ್ಮಾಪಕರಾದ ಕೆ. ಮಂಜು, ಸಂಗೀತ ನಿರ್ದೇಶಕ ಚರಣ್ ರಾಜ್ ಉಪಸ್ಥಿತಿ ಇದ್ದರು.
ನನ್ ಜವಾಬ್ದಾರಿಗಳನ್ನು ಇಬ್ಬರು ಮಕ್ಕಳಿಗೆ ನೀಡಿದ್ದೇನೆ. ವಿನಯ್ ಹತ್ತಿರದಿಂದ ನೋಡಿದ್ದು ಕಡಿಮೆ. ಒಳ್ಳೆ ಮನಸು ಇರುವ ವ್ಯಕ್ತಿ. ಅಣ್ಣಾವ್ರ ಸಿನಿಮಾ ನೋಡುತ್ತಿದ್ದವರು ನಾವು. ಅವರ ಮೊಮ್ಮಕ್ಕಳ ಜೊತೆ ಸಿನಿಮಾ ಮಾಡುತ್ತೇವೆ ಎಂದರೆ ಅದು ಭಾಗ್ಯ. ಇದು ದೊಡ್ಡ ಜವಾಬ್ದಾರಿ. ನಾನು ಯಾವುದೇ ತಂಡ ಕಟ್ಟಿಲ್ಲ. ನಮಗೆ ಯಾರ ಸಪೋರ್ಟ್ ಇರಲಿಲ್ಲ. ಯೋಗಿ ಬಂದಿದ್ದು ಮನಸ್ಸಿಗೆ ಖುಷಿ ಕೊಟ್ಟಿದೆ ಎಂದಿದ್ದಾರೆ. ನಾನು ಸಂಗೀತ ಗೊತ್ತಿಲ್ಲದ ಮೂಗ ಎಂದ ದುನಿಯಾ ವಿಜಯ್ ಹೇಳಿದ್ದಾರೆ.