ಎಲ್ಲಾದರೂ ಹೊರ ಊರಿಗೆ ಪ್ರಯಾಣ ಮಾಡುವಾಗ.. ಹಿರಿಯರಾಗಲಿ ಕಿರಿಯರಾಗಲೀ ನಿಮ್ಮ ಬ್ಯಾಗ್ ನಲ್ಲಿ ಒಂದಷ್ಟು ಡ್ರೈಫ್ರೂಟ್ಸ್ ಸದಾ ಇರಲಿ..ಏಕೇ ಗೊತ್ತಾ… ಕೆಲವೊಮ್ಮೆ ಇದ್ದಕ್ಕಿದ್ದಂತೆ ಹೊಟ್ಟೆ ತೊಳಸಿದಂತಾಗುವುದು,ಹೊಟ್ಟೆ ಹಸಿವು, ಸುಸ್ತಾಗುವುದು,ತಲೆಸುತ್ತಿ ದಂತಾಗುವುದು ಈ ರೀತಿಯಲ್ಲ ಆಗುವುದು ಸಹಜ.
ಅದು ಖಾಲಿ ಹೊಟ್ಟೆಗೆ ಆಗಿರಬಹುದು ಅಥವಾ ಹೊಟ್ಟೆತುಂಬಾ ಊಟ ಮಾಡಿದರು ಆಗಿರಬಹುದು. ಅಥವಾ ಏನೂ ಇಲ್ಲದೆ ಮಧುಮೇಹಿಗಳಿಗೆ ಆಗುವ ಸುಸ್ತು ಕೂಡ ಪರಿಹಾರವಾಗುವುದು ಒಂದಿಷ್ಟು ಡ್ರೈ ಫ್ರೂಟ್ಸ್ ನಿಂದ ಎಂದರೆ ನಂಬಲಾರಿರಿ..
ಖರ್ಜೂರ,,,, ಅಂಜುರಾ ಇವೆರಡೂ ಅತಿಶೀಘ್ರವಾಗಿ ನಿಮ್ಮ ಸುಸ್ತನ್ನು ಕಮ್ಮಿ ಮಾಡುತ್ತದೆ. ಮಧುಮೇಹಿಗಳಿಗೆ ಹೆಚ್ಚು ತಿನ್ನಬಾರದೆಂದು ಹೇಳುತ್ತಾರೆ ಆದರೆ ಇಂತಹ ಸಮಯದಲ್ಲಿ ಒಂದೆರಡು ಕರ್ಜೂರ ತೆಗೆದುಕೊಂಡರೆಒಳ್ಳೆಯದು.. ಕೆಲವೊಮ್ಮೆ ಶುಗರ್ ಕಮ್ಮಿಯಾದಂತೆ ಅನುಭವ ಆಗುವುದು.. ಅಂತಹ ಸಮಯದಲ್ಲಿ ಈ ಕರ್ಜೂರ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಶುಗರ್ ಲೆವೆಲ್ ಮಟ್ಟವನ್ನು ಸರಿದೂಗಿಸುತ್ತದೆ..
ದ್ರಾಕ್ಷಿ ಯು ವಾಮಿಟ್ ಸೆನ್ಸೇಷನ್, ಹೊಟ್ಟೆ ತೊಳೆಸುವುದು, ತಲೆ ಸುತ್ತುವುದು, ಬಾಯಿ ಒಣಗುವುದು,ಇದೆಲ್ಲವನ್ನೂ ಕ್ಷಣಾರ್ಧದಲ್ಲಿ ಪರಿಹರಿಸುತ್ತದೆ.
ಬಾದಾಮಿ, ಗೋಡಂಬಿ ಪಿಸ್ತ ಇವುಗಳಜೊತೆಗೆ ಚೂರು ಕೆಂಪು ಕಲ್ಲು ಸಕ್ಕರೆ ಇವೆಲ್ಲವೂ ಹೊಟ್ಟೆಯನ್ನು ತುಂಬಿಸಲು ಕ್ಷಣಾರ್ಧದಲ್ಲಿ ಪರಿಣಾಮಕಾರಿ..
ಉಪ್ಪು ಹಾಕಿದ ಪಿಸ್ತಾ ಬೀಜಗಳನ್ನು ತಿಂದುನೀರುಕುಡಿದರಂತೂ ಆ ಕ್ಷಣಕ್ಕೆ ಆಗುತ್ತಿರುವ ಹಸಿವಿನ ಸಂಕಟ ಕ್ಷಣಾರ್ಧದಲ್ಲಿ ಕಮ್ಮಿಯಾಗುತ್ತದೆ.. ಹೊಟ್ಟೆ ತಕ್ಷಣಕ್ಕೆ ತುಂಬಿದಂತಾಗಿ ಬಿಡುತ್ತದೆ.
ಪ್ರಯಾಣಗಳಲ್ಲಿ ಎಲ್ಲಿಯೂ ಊಟ ಸಿಗುವುದಿಲ್ಲ ಎನ್ನುವ ಸಂದರ್ಭಗಳಲ್ಲಿ ಅತಿದೂರದ ಪ್ರಯಾಣಗಳಲ್ಲಿ ನಿಮ್ಮ ಜೊತೆ ಸದಾ ಆಹಾರವಾಗಿ ಇದನ್ನು ಒಂದಷ್ಟು ಇಟ್ಟುಕೊಳ್ಳುವುದರಲ್ಲಿ ಕಷ್ಟವೇನಲ್ಲ.. ಸ್ವಲ್ಪ ತಿಂದು ತಕ್ಷಣ ಸ್ವಲ್ಪ ನೀರು ಕುಡಿದರಂತೂ ಹೊಟ್ಟೆ ಭರ್ತಿಯಾಗಿ ಬಿಡುತ್ತದೆ.. ಖಾಲಿ ಹೊಟ್ಟೆ ಇರುವುದರಿಂದ ಗ್ಯಾಸ್ಟ್ರಿಕ್ ತಲೆನೋವು ಎಲ್ಲವೂ ಪ್ರಯಾಣಗಳಲ್ಲಿ ಕೆಲವರಿಗೆ ಸಹಜ..
ಕುರುಕಲು ತಿಂಡಿಗಳು, ಎಣ್ಣೆಯಲ್ಲಿ ಕರಿದ ಪದಾರ್ಥಗಳು,, ಜಂಕ್ ಫುಡ್ ಗಳು ಇವೆಲ್ಲಕ್ಕಿಂತಇದು ಆರೋಗ್ಯಕ್ಕೆ ಒಳ್ಳೆಯದು..
ಒಮ್ಮೆ ಇದನ್ನು ಮಾಡಿ ನೋಡಿ. ✍️ಯಶು ಪ್ರಸಾದ್ ..✍️.🙏

