ನಾಗ್ಪುರ: ಕೃಷಿ ಕ್ಷೇತ್ರದಲ್ಲಿ ಡ್ರೋನ್ ಬಳಕೆ ಮಾಡುವುದರಿಂದ ವಾರ್ಷಿಕವಾಗಿ 50 ಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡಬಹುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಸಂಬಂಧ ನಾಗ್ಪುರದ ಆಯಗ್ರೋ ವಿಷನ್ ಎಕ್ಸಿಬಿಷನ್ನಲ್ಲಿ ರೈತರನ್ನುದ್ದೇಶಿಸಿ ಮಾತಾಡಿದ ನಿತಿನ್ ಗಡ್ಕರಿ, ಕೃಷಿ ರಂಗದಲ್ಲಿ ಡ್ರೋನ್ ಅಳವಡಿಸುವ ಬಗ್ಗೆ ತಮ್ಮ ಸಂಪುಟದ ಇಬ್ಬರು ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಅಗತ್ಯ ಕರಡು ನೀತಿ ರೂಪಿಸುವುದಾಗಿ ತಿಳಿಸಿದ್ದಾರೆ.
ಡ್ರೋನ್ ಬಳಕೆಯಿಂದ ರೈತರಿಗೆ ಪ್ರಯೋಜನೆ ಆಗಲಿದೆ. ತಮ್ಮ ಜಮೀನಿನಲ್ಲಿ ಡ್ರೋನ್ ಬಳಿಸಿದರೆ, ಕಡಿಮೆ ಅವಧಿಯಲ್ಲಿ ಕೀಟನಾಶಕಗಳ ಔಷಧಿ ಸಿಂಪಡಿಸಬಹುದು. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಲಿದೆ. ಅಲ್ಲದೇ ರೈತರು ಇದರಿಂದ ಬರೋ ಬೆಳೆಗಳಿಂದ ಭಾರೀ ಆದಾಯ ಗಳಿಸಬಹುದು ಎಂದರು. ಇನ್ನು, ಆಯಗ್ರೋ ವಿಷನ್ ಎಕ್ಸಿಬಿಷನ್ನಲ್ಲಿ ಭಾಗಿಯಾಗಿದ್ದ ನಿತಿನ್ ಗಡ್ಕರಿ ಅವರಿಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕ ಸಚಿವ ನಾರಾಯಣ ರಾಣೆ ಸಹ ಭಾಗಿಯಾಗಿದ್ದರು.
