ತುಮಕೂರು:- ಆತ ತಾನೊಬ್ಬ ವಿಜ್ಞಾನಿ ಎಂದು ಇಡೀ ಕರ್ನಾಟಕ ಜನತೆಗೆ ಮಕ್ಮಲ್ ಟೋಪಿ ಹಾಕಿದವ. ಭಾರತ ದೇಶವನ್ನು ವಿದೇಶಗಳಲ್ಲಿ ಪ್ರಿತಿನಿಧಿಸಿದ್ದೇನೆ ತಾನು ಡ್ರೋನ್ ಕಂಡು ಹಿಡಿದಿದ್ದೇನೆ ಎಂದು ನಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಫೋಟೋ ಹಾಕಿ ಬಿಟ್ಟಿ ಶೋಕಿ ಕೊಟ್ಟಿದ್ದ. ಅಯ್ಯೋ ಪಾಪ ಕನ್ನಡಿಗರು ಇವನು ಏನೋ ಘನಂದಾರಿ ಕೆಲಸ ಮಾಡಿದ್ದಾನೆ ಎಂದು ಹೊಗಳಿದ್ದೇ ಹೊಗಳಿದ್ದು.
ಪತಿ ಬಿಟ್ಟು ಬರಲು ಒಪ್ಪದ ವಿವಾಹಿತೆ ಮಹಿಳೆ ಕೊಲೆಗೈದ ಪಾಗಲ್ ಪ್ರೇಮಿ! ಬಳಿಕ ತಾನೂ ನೇಣಿಗೆ ಕೊರಳೊಡ್ಡಿದ!
ಆದರೆ ನಿಜ ಬಣ್ಣ ಬಯಲು ಆದ್ಮೇಲೆ ಒಂದು ಕ್ಷಣ ಎಲ್ಲರೂ ಶಾಕ್ ಆಗಿದ್ದರು. ಅಷ್ಟೇ ಯಾಕೆ ಈತನಿಗೆ ಬೆಂಬಲ ಕೊಟ್ಟು ಸಹಾಯ ಮಾಡಿದ್ದ ಎಷ್ಟೋ ನಟರು ಬಾಯ್ಮೇಲೆ ಬೆರಳಿಟ್ಟು ಎಂತವನಿಗೆ ಸಹಾಯ ಮಾಡುದ್ವಿ ಎಂದು ಕೊರಗಿದ್ದರು. ಇದರಿಂದ ಆತ ಕುಗ್ಗಿ ಹೋಗಿದ್ದ. ಬಳಿಕ ಒಂದು ವೇದಿಕೆಯಲ್ಲಿ ಅವನಿಗೆ ಅವಕಾಶ ಸಿಕ್ಕು ಕನ್ನಡಿಗರ ಮನಗೆದ್ದ.
ಎಸ್ ನಾವು ಹೇಳುತ್ತಿರೋದು ಡ್ರೋನ್ ಪ್ರತಾಪ್ ಬಗ್ಗೆ. ಬಿಗ್ ಬಾಸ್ ಶೋನಲ್ಲಿ ಮುಗ್ದತೆಯಿಂದಲೇ ಕನ್ನಡಿಗರ ಮನ ಗೆದ್ದಿದ್ದ ಮಂಡ್ಯದ ಹುಡುಗ ಪ್ರತಾಪ್ ಬಗ್ಗೆ.
ಆದರೆ ಇದೀಗ ಪ್ರತಾಪ್ ಮತ್ತೊಮ್ಮೆ ಎಡವಟ್ಟು ಮಾಡಿ ಜೈಲು ಪಾಲಾಗಿದ್ದಾರೆ. ಮಾಜಿ ಬಿಗ್ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸೈನ್ಸ್ ವಿಡಿಯೋ ಹೆಸರಿನಲ್ಲಿ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಮಾಜಿ ಬಿಗ್ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ನೀರಿನೊಳಗೆ ಕೆಮಿಕಲ್ ಹಾಕಿ ಬ್ಲಾಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಿರ್ಜನ ಪ್ರದರ್ಶನದಲ್ಲಿದ್ದ ಕೃಷಿ ಹೊಂಡದಂತ ಆಳವಾದ ಗುಂಡಿಯಲ್ಲಿನ ನೀರಿಗೆ ಕೆಮಿಕಲ್ ಹಾಕಿ ನೀರಿನಾಳದಲ್ಲಿ ಬ್ಲಾಸ್ಟ್ ಮಾಡಿದ್ದರು. ಕೆಮಿಕಲ್ ಎಸೆದಿದ್ದೇ ತಡ ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್ ಆಗಿದೆ, ಬೆಂಕಿ ಸಹ ಚಿಮ್ಮಿದೆ. ಅಷ್ಟೇ ಅಲ್ಲದೇ ಬಾಂಬ್ ಬ್ಲಾಸ್ಟ್ ರೀತಿ ದೃಶ್ಯ ಕಂಡುಬಂದಿದೆ. ಈ ವೀಡಿಯೋ ನೋಡಿ ಪ್ರತಾಪ್ ಬಿಲ್ಡಪ್ ಬೇರೆ ಕೊಟ್ಟಿದ್ದರು. ಜೊತೆಗೆ ನಗು-ನಗುತ್ತಲೇ ನೋಡಿ.. ನೋಡಿ ದೊಡ್ಡ ಬ್ಲಾಸ್ಟ್ ಇದು ಎಂದು ಪ್ರತಾಪ್ ಕೂಗಿದ್ದರು. ಈ ವಿಡಿಯೋ ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು.
ಇದೀಗ ಪ್ರತಾಪ್ ರನ್ನು ಅರೆಸ್ಟ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.