ಸಾಮಾನ್ಯವಾಗಿ ಪ್ರತಿಯೊಬ್ಬರು ಹೆಚ್ಚು ಚಹಾ ಸೇವಿಸಲು ಲೈಕ್ ಮಾಡ್ತಾರೆ. ಒಂದು ಕಪ್ ಚಹಾ ಸೇವಿಸಿಯೇ ಬಹುತೇಕ ಜನರು ತಮ್ಮ ದಿನಚರಿಯನ್ನು ಪ್ರಾರಂಭಿಸುತ್ತಾರೆ. ಕೆಲವೊಮ್ಮೆ ಚಹಾ ತಲೆನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಮಳೆಗಾಲದಲ್ಲಿ ಜನರು ತುಂಬಾ ಉತ್ಸಾಹದಿಂದ ಟೀ ಸೇವಿಸುತ್ತಾ ಪಕೋಡಗಳನ್ನು ಸವಿಯುತ್ತಾರೆ. ಅದೇ ರೀತಿ ಶೀತ ಋತುವಿನಲ್ಲಿ ಚಹಾ ಸೇವನೆ ಹೆಚ್ಚಾಗುತ್ತದೆ. ಶೀತವನ್ನು ತಪ್ಪಿಸಲು ಜನರು ಪ್ರತಿದಿನ ಶುಂಠಿ ಚಹಾವನ್ನು ಸೇವಿಸುತ್ತಾರೆ.
ಕೆಲವರು ಚಹಾವನ್ನು ತಪ್ಪಾದ ರೀತಿಯಲ್ಲಿ ಸೇವಿಸುತ್ತಾರೆ. ಕೆಲವೊಮ್ಮೆ ನಾವು ಹೆಚ್ಚು ಚಹಾ ಕುಡಿಯುತ್ತೇವೆ. ಕೆಲವೊಮ್ಮೆ ನಾವು ಖಾಲಿ ಹೊಟ್ಟೆಯಲ್ಲಿಯೇ ಚಹಾವನ್ನು ಕುಡಿಯುತ್ತೇವೆ. ಕೆಲವರು ಆಹಾರವನ್ನು ಸೇವಿಸಿದ ನಂತರ ರಾತ್ರಿ ವೇಳೆ ಚಹಾವನ್ನು ಕುಡಿಯುತ್ತೇವೆ. ಚಹಾವು ಅನೇಕ ಸಣ್ಣ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಆದರೆ ತಪ್ಪಾದ ರೀತಿಯಲ್ಲಿ ಸೇವಿಸಿದರೆ ಅದು ಆರೋಗ್ಯಕ್ಕೆ ಅಪಾಯಕಾರಿ. ನೀವೂ ಕೂಡ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುತ್ತಿದ್ದರೆ ತಪ್ಪದೇ ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕು.
ಅಧಿಕ ಬಿಪಿ ಮತ್ತು ಹೃದಯಾಘಾತ ರೋಗಿಗಳು ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯಬಹುದೇ ಎಂಬ ಗೊಂದಲದಲ್ಲಿರುತ್ತಾರೆ? ಅಧಿಕ ಬಿಪಿ ರೋಗಿಗಳಿಗೆ ಇದು ಹಾನಿಕಾರಕವೇ? ಇಂದು ಅನೇಕರು ಅಧಿಕ ಬಿಪಿ ಮತ್ತು ಹೃದ್ರೋಗದಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿ. ಹೀಗಾಗಿ ಹೆಚ್ಚಿನ ಜನರು ಚಹಾದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಅಧಿಕ ಬಿಪಿ ಇರುವವರು ಮತ್ತು ಹೃದ್ರೋಗಿಗಳೂ ಕೂಡ ಚಹಾ ಸೇವಿಸುವುದನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದು ಹೈ ಬಿಪಿ ರೋಗಿಗಳಿಗೆ ಎಚ್ಚರಿಕೆ ಗಂಟೆಯೇ ಎಂಬ ಪ್ರಶ್ನೆ ಮೂಡಿದೆ.
ನೀವು ಅಧಿಕ ಬಿಪಿ ರೋಗಿಗಳಾಗಿದ್ದರೆ ಯಾವಾಗಲೂ ಹಾಲಿನೊಂದಿಗೆ ಟೀ ಕುಡಿಯಿರಿ. ಏಕೆಂದರೆ ಹಾಲಿನೊಂದಿಗೆ ಟೀ ಕುಡಿದರೆ ಅದು ಬಿಪಿಯನ್ನು ಕಡಿಮೆ ಮಾಡುವ ಬದಲು ಹೆಚ್ಚಿಸಬಹುದು. ಅಲ್ಲದೆ ಹಾಲಿನೊಂದಿಗೆ ಚಹಾವನ್ನು ಕುಡಿಯುವುದು ಗ್ಯಾಸ್ ಮತ್ತು ರಕ್ತನಾಳಗಳ ಕಿರಿದಾಗುವಿಕೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಹಾಲಿನೊಂದಿಗೆ ಚಹಾವನ್ನು ಕುಡಿಯುವುದನ್ನು ಆದಷ್ಟು ತಪ್ಪಿಸಿ.
ನೀವು ಬೆಳಗ್ಗೆ ಮೊದಲು ಚಹಾ ಕುಡಿಯಲು ಇಷ್ಟಪಡುತ್ತಿದ್ದರೆ, ಅಧಿಕ ಬಿಪಿ ರೋಗಿಗಳಿಗೆ ಗ್ರೀನ್ ಟೀ ಉತ್ತಮ ಆಯ್ಕೆಯಾಗಿದೆ. ಇದರಿಂದ ನಿಮ್ಮ ಅಧಿಕ ಬಿಪಿ ಸಮಸ್ಯೆ ಕಡಿಮೆಯಾಗುತ್ತದೆ