ಧಾರವಾಡ:- ಗ್ರಾಪಂ ಪಿಡಿಒ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
ತಾಲೂಕಿನ ಯರಿಕೊಪ್ಪ ಗ್ರಾಪಂ ಪಿಡಿಒ ನಾಗರಾಜ್, ಆತ್ಮಹತ್ಯೆಗೆ ಯತ್ನಿಸಿದ ಅಧಿಕಾರಿ. ಇಲಿ ಔಷಧಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಆತ್ಮಹತ್ಯೆ ಯತ್ನಕ್ಕೂ ಮುಂಚೆ PDO ವಿಡಿಯೋ ಮಾಡಿದ್ದು, ಆರ್ಟಿಐ ಕಾರ್ಯಕರ್ತನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿರುವುದು ತಿಳಿದು ಬಂದಿದೆ.
ಮಲ್ಲಿಕಾರ್ಜುನ ರೊಟ್ಟಿಗವಾಡ, ಕಿರುಕುಳ ನೀಡಿದ ಆರ್ಟಿಐ ಕಾರ್ಯಕರ್ತ ಎನ್ನಲಾಗಿದೆ. ರೊಟ್ಟಿಗವಾಡ ಹೆಸರು ಹೇಳಿ ವಿಡಿಯೋ ಮಾಡಿದ್ದಾರೆ. ಬಹಳ ಅಧಿಕಾರಿಗಳಿಗೆ ರೊಟ್ಟಿಗವಾಡ ಕಿರುಕುಳ ಕೊಟ್ಟಿದ್ದಾರೆ. ನಮಗೂ ಕಿರುಕುಳ ಕೊಟ್ಟಿದ್ದಾರೆ. ಮಾಡಲು ಆಗದೇ ಇರೋ ಕೆಲಸಗಳನ್ನು ಮಾಡಲು ಒತ್ತಾಯಿಸುತ್ತಾರೆ. ಅದಕ್ಕಾಗಿ ನನ್ನ ಜೀವನ ಇಲ್ಲಿಗೆ ಎಂಡ್ ಮಾಡಲು ತಿರ್ಮಾನಿಸಿದ್ದೇನೆ.
ವಿಷ ಕುಡಿಯುತ್ತಿದ್ದೇನೆ I am SORRY ಎಂದು ವಿಡಿಯೋ ಸ್ನೇಹಿತರಿಗೆ ಹಾಕಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅನೇಕರಿಗೆ ವಾಟ್ಸಾಪ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಾಟ್ಸಾಪ್ ಗಮನಿಸಿ ಸ್ನೇಹಿತರು ಹುಡುಕಿದ್ದಾರೆ. ಹುಡುಕಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಧಾರವಾಡ-ಬೆಳಗಾವಿ ರಸ್ತೆಯಲ್ಲಿವ ಪಕ್ಕದಲ್ಲಿ ಆತ್ಮಹತ್ಯೆಗೆ ಯತ್ನಿಸಿರುವುದು ತಿಳಿದು ಬಂದಿದೆ. ಸದ್ಯ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಹಿನ್ನೆಲೆ ವೈದ್ಯರ ಸೂಚನೆ ಮೇರೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಧಾರವಾಡ ಉಪನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಜರುಗಿದೆ.