ಬೆಂಗಳೂರು: ಇತ್ತಿಚೇಗೆ ಬ್ರಾಂಡೆಡ್ ಟೀ ಕುಡಿದ್ರು ಬಾಯಿಗೆ ರುಚಿ ಸಿಕ್ತಿಲ್ವಾ? ಬ್ರಾಂಡೆಂಡ್ ಡಿಟರ್ಜೆಂಟ್ ನಲ್ಲಿ ಬಟ್ಟೆ ಹೊಗೆದ್ರು ಕೊಳೆ ಹೋಗ್ತಿಲ್ವಾ? ಟೀ ಕುಡಿದ್ರೆ ರುಚಿನೂ ಸಿಗಲ್ಲ. ಬಟ್ಟೆಯಲ್ಲಿ ಕೊಳೆನೂ ಹೋಗಲ್ಲ ಯಾಕಂದ್ರೆ ಎಲ್ಲಾ ನಕಲಿ. ಇಡೀ ಬೆಂಗಳೂರು, ರಾಮನಗರ, ಕೋಲಾರ ಸೇರಿದಂತೆ ರಾಜ್ಯದ ವಿವಿಧ ಭಾಗಗಲಿಗೆ ಸರಬರಾಜಾಗ್ತಿದ್ದ ನಕಲಿ 3 ರೋಜಸ್ ,ಸರ್ಫ್ ಎಕ್ಸೆಲ್ ಹಾಗೂ ರಿನ್ ಪೌಡರ್ ಫ್ಯಾಕ್ಟರಿ ಮೇಲೆ ಮಾದನಾಯಕನಹಳ್ಳಿ ಪೊಲೀಸ್ರು ದಾಳಿ ನಡೆಸಿದ್ದಾರೆ.
ಬ್ರಾಂಡೆಡ್ ಉತ್ಪನ್ನಗಳ ಸೇವಾ ಸಂಸ್ಥೆಯಾದ ಅನ್ವೇಶ್ ಐಪಿಆರ್ ಹಾಗೂ ಹಿಂದೂಸ್ಥಾನ ಯೂನಿ ಲಿವರ್ ಸಂಸ್ಥೆ ನೀಡಿದ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ. ಮೊದಲಿಗೆ ನಗರದಲ್ಲಿ ಸಪ್ಲೈ ಆಗ್ತಿದ್ದ ಸ್ಟಾಕ್ ಮೇಲೆ ಸಿಸಿಬಿ ಪೊಲೀಸ್ರು ನಿಗಾ ವಹಿಸಿದ್ರು. ಇದರ ಕಾರ್ಖಾನೆ ಗಳು ನಗರದ ಹೊರವಲಯದಲ್ಲಿ ಪತ್ತೆಯಾಗಿದ್ದು. ಮೂರು ಅಕ್ರಮಗಳ ಫ್ಯಾಕ್ಟರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ನಕಲಿ 3 ರೋಜಸ್ ಟೀ ಪೌಡರ್, ಸರ್ಫ್ ಎಕ್ಸೆಲ್ ಮತ್ತು ರಿನ್ ಡಿಟರ್ಜೆಂಟ್ ಪೌಡರ್ ಸೀಜ್ ಮಾಡಲಾಗಿದೆ.
ಅಕ್ರಮ ಅಡ್ಡೆ ನಡೆಸ್ತಿದ್ದ ಬೂಮಾರಾಮ್.ಮಾಧುಸಿಂಗ್, ವಿಕ್ರಂಸಿಂಗ್ ಹಾಗೂ ಶಿವಕುಮಾರ್ ಎಂಬುವವರನ್ನ ಬಂಧಿಸಲಾಗಿದೆ.
ಇನ್ನುಬ ರಾಜಸ್ಥಾನ ಮೂಲದ ಈ ಅಪರಾಧ ಜಾಲವು ತಮಿಳುನಾಡಿನ ಚೆನ್ನೈ, ಕೊಯಮತ್ತೂರು, ಸೇಲಂ, ವೆಲ್ಲೂರು ಮತ್ತು ಕರ್ನಾಟಕದ ದಾವಣಗೆರೆ, ಕೋಲಾರ ಮತ್ತು ರಾಮನಗರ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ನಕಲಿ ಉತ್ಪನ್ನಗಳನ್ನು ಸಕ್ರಿಯವಾಗಿ ವ್ಯಾಪಿಸೋರಾಗಿ ತಿಳಿದು ಬಂದಿದೆ.
ಇನ್ನೂ ಕೋಟಿ ಕೋಟಿ ಖರ್ಚು ಮಾಡಿ ಕಂಪನಿಯವರು ಪ್ರಚಾರ ಮಾಡಿ ಬೆಳಸಿದ್ದ ಬ್ರಾಂಡ್ ನಕಲು ಮಾಡಿ ಕಳಪೆ ವಸ್ತುಗಳನ್ನ ಬಳಸಿ ಮಾರಾಟ ಮಾಡೋ ಜಾಲದ ಕುರಿತು ಇನ್ನಾದ್ರು ಎಚ್ಚರ ವಹಿಸಬೇಕಿದೆ.