ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಡಾ.ಮಂಜುನಾಥ್ ಗೆಲುವು ಸಾಧಿಸಿದ ಹಿನ್ನೆಲೆ ಪತ್ನಿ ಅನುಸೂಯ ಮಂಜುನಾಥ್ ಗ್ರಾಮಸ್ಥರ ಹರಕೆ ತೀರಿಸಿದ್ದಾರೆ. ಕನಕಪುರ (Kanakapura) ತಾಲೂಕಿನ ಚೀರಣಕುಪ್ಪೆ ಗ್ರಾಮದ ಬಸವೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಅನುಸೂಯ, ಗ್ರಾಮಸ್ಥರ ಜೊತೆ ಸೇರಿ ಹರಕೆ ತೀರಿಸಿದರು.
ಬೆಂಗಳೂರು (Bengaluru) ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಗೆಲುವು ಸಾಧಿಸಿದರೆ ಗ್ರಾಮದ ದೇವಾಲಯಕ್ಕೆ ಬಸವ ದಾನ ನೀಡುವುದಾಗಿ ಗ್ರಾಮಸ್ಥರು ಹರಕೆ ಕಟ್ಟಿಕೊಂಡಿದ್ದರು. ಬಳಿಕ ಚುನಾವಣೆಯಲ್ಲಿ ಮಂಜುನಾಥ್ ಭರ್ಜರಿ ಗೆಲುವು ಸಾಧಿಸಿದ್ದ ಹಿನ್ನೆಲೆ ಇಂದು ಗ್ರಾಮಕ್ಕೆ ಆಗಮಿಸಿದ ಅನಸೂಯಾ ಮಂಜುನಾಥ್, ದೇವಾಲಯಕ್ಕೆ ಬಸವನ ದಾನ ಮಾಡಿದ್ದಾರೆ.
ಗ್ರಾಮಸ್ಥರ ಜೊತೆ ಸೇರಿ ಹರಕೆ ತೀರಿಸಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಅನುಸೂಯ ಮಂಜುನಾಥ್ ಜೊತೆಗೆ ಸ್ಥಳೀಯ ಬಿಜೆಪಿ-ಜೆಡಿಎಸ್ (BJP-JDS) ಮುಖಂಡರು ಸಾಥ್ ನೀಡಿದರು.