ಬೆಂಗಳೂರು:- ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಅವರನ್ನು ಬೆಂಬಲಿಸಿದ ಕಾರ್ಯಕರ್ತನ ತೋಟಕ್ಕೆ ಬೆಂಕಿ ಇಡಲಾಗಿದೆ.
ಸ್ವತಃ ಕಾರ್ಯಕರ್ತ ಈ ದೃಶ್ಯವನ್ನು ವಿಡಿಯೋ ಮಾಡಿದ್ದು, ಜೆಡಿಎಸ್ ಕರುನಾಡು ಪಡೆ ತನ್ನ ಫೇಸ್ ಬುಕ್ ಪೇಜಿನಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ.
IPL 2024: ರಾಜಸ್ಥಾನ್ ಸವಾಲಿಗೆ ಮಣಿದ KKR, ಸಾರ್ವಕಾಲಿಕ ದಾಖಲೆ ಸರಿಗಟ್ಟಿದ RR!
ತಾನೊಬ್ಬ ಜೆಡಿಎಸ್ ಕಾರ್ಯಕರ್ತ ಎಂದು ಹೇಳಿಕೊಂಡಿರುವ ರೈತ, ಈ ಕೃತ್ಯಕ್ಕೆ ಕಾಂಗ್ರೆಸ್ ಕಾರ್ಯಕರ್ತರೇ ಕಾರಣ ಎಂದು ಆರೋಪಿಸಿದ್ದಾನೆ. ನಾನು ಡಾ. ಸಿ.ಎನ್. ಮಂಜುನಾಥ್ ಅವರ ಪರವಾಗಿ ನಿಂತಿದ್ದಕ್ಕೆ ಈ ರೀತಿಯ ದುಷ್ಕೃತ್ಯ ಎಸೆಗಿದ್ದಾರೆ. ನಾಳೆ ದಿನ ನನಗೂ ಸಹ ಇವರು ಬೆಂಕಿ ಹಚ್ಚಬಹುದು . ಇಡಿ ತೋಟ ಸರ್ವನಾಶವಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂದು ಕಣ್ಣೀರು ಸುರಿಸಿದ್ದಾನೆ.
ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರನ್ನು ಬೆಂಬಲಿಸಿದ ಕಾರಣಕ್ಕೆ ಕಾರ್ಯಕರ್ತನ ತೆಂಗಿನ ತೋಟಕ್ಕೆ ಬೆಂಕಿ ಹಚ್ಚಿರುವ ಘಟನೆ ಕನಕಪುರದಲ್ಲಿ ನಡೆದಿದೆ ಎನ್ನಲಾಗಿದೆ.