ಕಲಬುರಗಿ: ಶತಾಯುಷಿ ಡಾ.ಭೀಮಣ್ಣ ಖಂಡ್ರೆಯವರಿಗೆ ಇದೀಗ ನೂರರ ಸಂಭ್ರಮ. ಹೀಗಾಗಿ ಎಲ್ಲ ಸಮುದಾಯದ ಜನರ ಏಳಿಗೆಗಾಗಿ ಹೋರಾಡಿದ ಖಂಡ್ರೆಯವರ ಶತಮಾನೋತ್ಸವ ಕಾರ್ಯಕ್ರಮ ಡಿಸೆಂಬರ್ 2 ರಂದು ಹುಟ್ಟೂರು ಭಾಲ್ಕಿಯಲ್ಲಿ ಆಯೋಜಿಸಿದ್ದು ಎಲ್ರೂ ಬನ್ನಿ ಅಂತ ಅಖಿಲ ಭಾರತ ವೀರಶೈವ ಮಹಾಸಭಾ ಆಹ್ವಾನ ನೀಡಿದೆ..
ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಹಾಸಭಾದ ಡಾ.ಸುಧಾ ಹಾಲಕಾಯಿ ಮತ್ತು ಗೌರಿ ಚಿಚಕೋಟಿ ಕಲ್ಯಾಣ ಕರ್ನಾಟಕದಲ್ಲಿ ಇದೊಂದು ಬೃಹತ್ ಸಮಾರಂಭ ಆಗಲಿದೆ ಅಂದ್ರು..AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ CM ಸಿದ್ರಾಮಯ್ಯ DCM ಡಿಕೆ ಶಿವಕುಮಾರ್ ಸೇರಿ ಗಣ್ಯಾತಿಗಣ್ಯರು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ..ಇದೇವೇಳೆ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಿದ್ದೇವೆ ಅಂತ ಹೇಳಿದ್ರು.