ಸಾಕಷ್ಟು ಆರೋಗ್ಯ ಸಮಸ್ಯೆಗೆ ಚಳಿಗಾಲ ಅಪವಾದವಿದ್ದಂತೆ, ಈ ಕಾಲದಲ್ಲಿ ಹೃದಯಾಘಾತ ಸಂಭವಿಸುವ ಸಾಧ್ಯತೆಗಳು ಕೂಡ ಹೆಚ್ಚು. ಹೌದು, ಹೃದಯಾಘಾತಕ್ಕೆ ಚಳಿಗಾಲ ಇನ್ನಷ್ಟು ಇಂಬುನೀಡಲಿದ್ದು, ವಾತಾವರಣದಲ್ಲಾಗುವ ಬದಲಾವಣೆಯಿಂದ ಹೃದಯದ ಮೇಲೂ ಪರಿಣಾಮ ಬೀರಲಿದೆ.
ಕಂದಕಕ್ಕೆ ಉರುಳಿದ ಸರ್ಕಾರಿ ಬಸ್: ಕುರಿಗಳ ಜೀವ ಉಳಿಸಲು ನಡೆಯಿತು ಅವಘಡ!
ಚಳಿಗಾಲದಲ್ಲಿ ಶೀತ ತಾಪಮಾನ ಹೆಚ್ಚಿರುವ ಕಾರಣ ರಕ್ತನಾಳಗಳು ಸಂಕುಚಿತಗೊಳ್ಳಲಿವೆ. ಮೊದಲೇ ದೇಹದ ಉಷ್ಣಾಂಶ ಕೂಡ ಕಡಿಮೆ ಇರುವುದರಿಂದ ಸಂಕುಚಿತಗೊಂಡ ರಕ್ತನಾಳದಲ್ಲಿ ರಕ್ತದ ಹರಿವನ್ನು ಕಾಪಾಡಿಕೊಳ್ಳಲು ಹೃದಯವು ಹೆಚ್ಚು ಶ್ರಮಿಸಬೇಕಾಗುತ್ತದೆ. ಈ ಹೊರೆ ಹೃದಯವನ್ನು ಆಯಾಸಗೊಳಿಸಬಹುದು, ಈ ಮೊದಲೇ ಹೃದಯದ ಸಮಸ್ಯೆಗೆ ಒಳಗಾಗಿರುವವರಿಗೆ ಹೃದಯ ಇನ್ನಷ್ಟು ಆಯಾಸಗೊಳ್ಳುವ ಸಾಧ್ಯತೆ ತೀರ ಹೆಚ್ಚು. ಹೀಗಾಗಿ ಕುಟುಂಬದಲ್ಲಿ ಹೃದಯಾಘಾತದ ಇತಿಹಾಸ ಹೊಂದಿರುವವರು, ಈಗಾಗಲೇ ಹೃದಯ ಸಮಸ್ಯೆ ಇರುವವರು, ಒಬೆಸಿಟಿ, ಡಯಾಬಿಟಿಸ್ ಹಾಗೂ ಬಿಪಿ ಹೊಂದಿರುವ ಜನರು ಚಳಿಗಾಲದಲ್ಲಿ ತಮ್ಮ ಹೃದಯದ ಆರೈಕೆಗೆ ಹೆಚ್ಚು ಆದ್ಯತೆ ನೀಡುವುದು ಒಳಿತು.
ಚಳಿಗಾಲದಲ್ಲಿ ಹೃದಯ ಆರೋಗ್ಯವಾಗಿರಲು ಕೆಲವು ಆಹಾರಗಳನ್ನು ತಿನ್ನುವುದನ್ನು ತಪ್ಪಿಸಬೇಕು.
ಅದರಲ್ಲೂ ಹೃದ್ರೋಗಿಗಳು ಚಳಿಗಾಲದಲ್ಲಿ ಆಹಾರ ಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಚಳಿಗಾಲದಲ್ಲಿ ಆಹಾರ ಮತ್ತು ಜೀವನಶೈಲಿ ಎರಡರಲ್ಲೂ ಬದಲಾವಣೆ ಅಗತ್ಯ ಎಂದು ದೆಹಲಿಯ ಆರ್ ಎಂಎಲ್ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದ ಪ್ರಾಧ್ಯಾಪಕ ಡಾ. ತರುಣ್ ಕುಮಾರ್ ಹೇಳಿದ್ದಾರೆ. ಈ ಋತುವಿನಲ್ಲಿ, ಹೃದ್ರೋಗಿಗಳು ಬರ್ಗರ್ ಮತ್ತು ಪಿಜ್ಜಾದಂತಹ ಕರಿದ ಆಹಾರಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಹೆಚ್ಚಿನ ಪ್ರಮಾಣದ ಸಿಹಿತಿಂಡಿಗಳನ್ನು ಕೂಡ ಸೇವಿಸಬಾರದು ಎನ್ನುತ್ತಾರೆ.
ಸಂಸ್ಕರಿಸಿದ ಹಿಟ್ಟಿನ ಆಹಾರಗಳು
ಮೈದಾದಿಂದ ತಯಾರಿಸಿದ ಆಹಾರಗಳು ರುಚಿಕರವಾಗಿದ್ದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಚಳಿಗಾಲದಲ್ಲಿ ಪರೋಟ, ಗೋಬಿ ಮಂಚೂರಿಯನ್ ಮುಂತಾದ ಆಹಾರಗಳನ್ನು ತಿನ್ನಬೇಡಿ.
ಕೃತಕ ಸಿಹಿತಿಂಡಿಗಳು
ಈ ರೀತಿಯ ಸಿಹಿತಿಂಡಿಗಳು ಮಧುಮೇಹ ರೋಗಿಗಳಿಗೆ ಅಪಾಯಕಾರಿ. ಚಳಿಗಾಲದಲ್ಲಿ ಕೃತಕ ಸಿಹಿತಿಂಡಿಗಳಿಂದ ದೂರವಿರಿ.
ಕೋಲ್ಡ್ ವಾಟರ್ ಕುಡಿಯಬೇಡಿ:
ತಂಪು ಪಾನೀಯಗಳು ಸಕ್ಕರೆಯ ಪ್ರಮಾಣವನ್ನು ಬಹುಬೇಗ ಹೆಚ್ಚಿಸುತ್ತವೆ ಎನ್ನುತ್ತಾರೆ ಡಾ. ತರುಣ್. ಇವುಗಳು ಕೆಫೀನ್ ಮತ್ತು ಸಕ್ಕರೆಯನ್ನು ಹೊಂದಿರುತ್ತವೆ, ಇದು ಹೃದ್ರೋಗಿಗಳಿಗೆ ಹಾನಿಕಾರಕವಾಗಿದೆ. ಯಾವುದೇ ರೂಪದಲ್ಲಿ (ಜ್ಯೂಸ್) ತಂಪು ಪಾನೀಯಗಳನ್ನು ಕುಡಿಯುವುದನ್ನು ತಪ್ಪಿಸಬೇಕು. ಹೃದ್ರೋಗಿಗಳು ಈ ಋತುವಿನಲ್ಲಿ ಬೆಣ್ಣೆ, ತುಪ್ಪ ಮತ್ತು ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದನ್ನು ತಪ್ಪಿಸುವುದು ಸಹ ಮುಖ್ಯವಾಗಿದೆ. ಈ ಎಲ್ಲಾ ವಸ್ತುಗಳು ಕೊಲೆಸ್ಟ್ರಾಲ್ ಅನ್ನು ತ್ವರಿತವಾಗಿ ಹೆಚ್ಚಿಸಬಹುದು, ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ.
ಹೃದ್ರೋಗಿಗಳು ತಮ್ಮ ಬಿಪಿ ಮತ್ತು ಶುಗರ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸಹ ಮುಖ್ಯವಾಗಿದೆ. ಏಕೆಂದರೆ ಬಿಪಿ ಹೆಚ್ಚಾದರೆ ಹೃದ್ರೋಗಿಗಳಿಗೆ ಅಪಾಯಕಾರಿಯಾಗಬಹುದು. ಪ್ರತಿ ಎರಡು ದಿನಗಳಿಗೊಮ್ಮೆ ನಿಮ್ಮ ರಕ್ತದೊತ್ತಡವನ್ನು ಪರೀಕ್ಷಿಸಿ.
ಯಾವ ವಸ್ತುಗಳನ್ನು ತಿನ್ನಬೇಕು:
ತಾಜಾ ಹಣ್ಣುಗಳು ಮತ್ತು ತರಕಾರಿಗಳು
ಬ್ರೌನ್ ರೈಸ್, ಕ್ವಿನೋವಾ, ಓಟ್ಸ್
ಬೀಜಗಳು ಮತ್ತು ಆವಕಾಡೊ
ಪ್ರೋಟೀನ್ಗಾಗಿ ಬೇಳೆಕಾಳುಗಳನ್ನು ಸೇವಿಸಿ
ವ್ಯಾಯಾಮವೂ ಮುಖ್ಯ:
ಚಳಿಗಾಲದಲ್ಲಿಯೂ ವ್ಯಾಯಾಮವು ಮುಖ್ಯವಾಗಿದೆ. ಚಳಿಗಾಲದಲ್ಲಿ ಸಾಕಷ್ಟು ಚಳಿ ಇರುವುದರಿಂದ ಬೆಳಗ್ಗೆ ಬೇಗ ಎದ್ದು ಯೋಗ ವ್ಯಾಯಾಮ, ವಾಕಿಂಗ್ ಮಾಡುವವರು ಸಂಖ್ಯೆ ತೀರಾ ಕಡಿಮೆ ಎಂದು ತಜ್ಞರು ಹೇಳುತ್ತಾರೆ. ಆದರೆ ಬೆಳಿಗ್ಗೆ ಕಡಿಮೆ ತಾಪಮಾನದಲ್ಲಿ ಹೊರಗೆ ಹೋಗುವುದನ್ನು ಮತ್ತು ವ್ಯಾಯಾಮ ಮಾಡುವುದನ್ನು ತಪ್ಪಿಸಿ ಎಂಬುದನ್ನು ನೆನಪಿನಲ್ಲಿಡಿ. ಮನೆಯಲ್ಲಿ ಲಘು ವ್ಯಾಯಾಮ ಮಾಡಿ.
ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಏಕೆ ಹೆಚ್ಚು?:
ವಾಸ್ತವವಾಗಿ, ಚಳಿಗೆ ಅಪಧಮನಿಗಳು ಕುಗ್ಗುತ್ತವೆ, ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಹೃದಯದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದಲ್ಲದೇ ಚಳಿಗಾಲದಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುತ್ತದೆ, ಇದರಿಂದ ಮಾಲಿನ್ಯದ ಕಣಗಳು ಉಸಿರಾಟದ ಮೂಲಕ ಶ್ವಾಸಕೋಶವನ್ನು ಪ್ರವೇಶಿಸುತ್ತವೆ ಮತ್ತು ರಕ್ತದಲ್ಲಿ ಸಂಗ್ರಹವಾಗುತ್ತವೆ ಮತ್ತು ರಕ್ತನಾಳಗಳಲ್ಲಿ ಅಡಚಣೆಯನ್ನು ಉಂಟುಮಾಡುತ್ತವೆ. ಈ ಕಾರಣಗಳಿಂದ ಹೃದಯಾಘಾತದ ಅಪಾಯವು ಹೆಚ್ಚಾಗುತ್ತದೆ.